ಶ್ರೀರಂಗಪಟ್ಟಣ: ಲಾರಿ, ಬೈಕ್‌ ಅಪಘಾತ!

ಶ್ರೀರಂಗಪಟ್ಟಣ: ಪಟ್ಟಣದಿಂದ ಬೈಕ್‌ನಲ್ಲಿ ಊರಿಗೆ ತೆರಳುತ್ತಿದ್ದ ತಂದೆ ಮಗ ಇಬ್ಬರೂ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಪಟ್ಟಣದ ಕುವೆಂಪು ವೃತ್ತದ ಬಳಿ ಸಂಭವಿಸಿದೆ.

ತಿ.ನರಸೀಪುರ ತಾಲ್ಲೂಕಿನ ಹಿಟ್ಟುವಳ್ಳಿ ಗ್ರಾಮದ ಮಹದೇವು, ಇವರ ಮಗ ಶಶಿಧರ್ ಅಪಘಾತದಲ್ಲಿ ಗಾಯಗೊಂಡವರು.

ಇವರು ಪಟ್ಟಣದಲ್ಲಿನ ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆಂದು ಬಂದಿದ್ದು, ಊಟ ಮುಗಿಸಿಕೊಂಡು ವಾಪಸ್ ಊರಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಬೆಂಗಳೂರು ಕಡೆಯಿಂದ ಬಂದ ಲಾರಿಯೊಂದು ಈ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದ ಚಾಲಕ ಡಿವೈಡರ್ ಮೇಲೆ ಲಾರಿ ಹತ್ತಿಸಿದ್ದಾನೆ.

ಈ ಕ್ಷಣ ಬೈಕ್‌ನಿಂದ ಇಬ್ಬರೂ ಬಿದ್ದಿದ್ದಾರೆ. ಬೈಕ್ ಸಂಪೂರ್ಣ ಜಜ್ಜಿಹೋಗಿದೆ. ತಂದೆ ಮಗ ಇಬ್ಬರಿಗೂ ತಲೆ ಕೈ ಕಾಲುಗಳಿಗೆ ಗಂಭೀರ ಪೆಟ್ಟಾಗಿದೆ. ಕೂಡಲೇ ಧಾವಿಸಿ ಬಂದ ಜನರು ಇವರನ್ನು ಪಟ್ಟಣದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳಿಸಲಾಯಿತು.

ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us