ಪೆಟ್ರೋಲ್‍ ಟ್ಯಾಂಕರ್‌ಗೆ ಬೈಕ್ ಡಿಕ್ಕಿ: ಯುವಕರಿಬ್ಬರ ದುರ್ಮರಣ

ಚಾಮರಾಜನಗರ: ನಗರದ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದ ಬಳಿ ಬುಧವಾರ ರಾತ್ರಿ ಪೆಟ್ರೋಲ್ ಟ್ಯಾಂಕರ್ ಹಾಗೂ ಎರಡು ಬೈಕ್ ಗಳ‌ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕರಿಬ್ಬರು ದುರ್ಮರಣ ಹೊಂದಿದ್ದಾರೆ.

ತಾಲ್ಲೂಕಿನ ಚಂದುಕಟ್ಟೆ ಮೋಳೆ ಗ್ರಾಮದ ಮಹೇಶ್ (23), ಹುಲ್ಲಾಪುರದ ಮಣಿಕಂಠ(24) ಮೃತಪಟ್ಟವರು.

ಹರದನಹಳ್ಳಿಯ ಕಡೆಯಿಂದ ಬಂದ ಪೆಟ್ರೋಲ್ ಟ್ಯಾಂಕರ್ ಚಾಮರಾಜನಗರದ ಕಡೆಯಿಂದ ಬರುತ್ತಿದ್ದ ಎರಡು ಬೈಕ್ ಗಳ ಡಿಕ್ಕಿ ಹೊಡೆದಿದೆ. ಮೊದಲು ಡಿಕ್ಕಿ ಹೊಡೆದ ಬೈಕ್ ನ ಸವಾರ ಮಣಿಕಂಠ ತೀವ್ರವಾಗಿ ಗಾಯಗೊಂಡು, ಮೈಸೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರೆ, ನಂತರ ಡಿಕ್ಕಿ ಹೊಡೆದು ಎರಡನೇ ಬೈಕ್ ನ ಸವಾರ ಮಹೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us