ದನ ತೊಳೆಯಲು ಹೋಗಿ ಕೆರೆಯಲ್ಲಿ ಮುಳುಗಿ ಇಬ್ಬರು ದುರ್ಮರಣ!

ಹುಣಸೂರು: ಕೆರೆಯಲ್ಲಿ ದನ ತೊಳೆಯಲು ಹೋದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಗುರುಪುರ ಗ್ರಾಮದಲ್ಲಿ ನಡೆದಿದೆ.

ಹಳೆವಾರಂಚಿ ಗ್ರಾಮದ ಅಜ್ಮಲ್ ಪಾಷ (25) ಹಾಗೂ ರಜಾಕ್ ಅಹಮ್ಮದ್ (28) ಮೃತಪಟ್ಟವರು.

ಗುರುಪುರ ಗ್ರಾಮದ ಕೆರೆಗೆ ಹೋಗಿದ್ದ ಅಜ್ಮಲ್ ಪಾಷ ಅವರು ದನ ತೊಳೆಯುವ ಸಂದರ್ಭದಲ್ಲಿ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದನ್ನು ಗಮನಿಸಿದ ರಜಾಕ್, ಕೂಡಲೇ ಅಜ್ಮಲ್ ಅವರನ್ನು ಕಾಪಾಡಲು ಕೆರೆಗೆ ಇಳಿದಿದ್ದಾರೆ. ಈ ವೇಳೆ ಅವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ವಿಚಾರ ತಿಳಿಯುತ್ತಿದಂತೆ ಗ್ರಾಮಸ್ಥರು ಕೆರೆಯ ಬಳಿ ಆಗಮಿಸಿ, ಇಬ್ಬರ ಮೃತದೇಹಗಳನ್ನೂ ಹೊರತೆಗೆದಿದ್ದಾರೆ.

ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡು ಮೃತದೇಹವನ್ನು ವಾರಸುದಾರರಿಗೆ ನೀಡಿದ್ದಾರೆ.

× Chat with us