ಗರ್ಭ ಧರಿಸಿದ್ದ 1.30 ಲಕ್ಷ ರೂ. ಮೌಲ್ಯದ ಎರಡು ಹಸುಗಳ ನಿಗೂಢ ಸಾವು

ಕೆ.ಆರ್‌.ಪೇಟೆ: 1.30 ಲಕ್ಷ ರೂ. ಬೆಲೆ ಬಾಳುತ್ತಿದ್ದ ಎರಡು ಹಸುಗಳು ನಿಗೂಢವಾಗಿ ಸಾವಿಗೀಡಾಗಿರುವ ಘಟನೆ ತಾಲ್ಲೂಕಿನ ಬಲ್ಲೇನಹಳ್ಳಿಯಲ್ಲಿ ನಡೆದಿದೆ.

ಬಿ.ವಿ.ಪುಟ್ಟರಾಜು ಅವರಿಗೆ ಸೇರಿದ ಹಸುಗಳು ನಿಗೂಢವಾಗಿ ಮೃತಪಟ್ಟಿವೆ. ನಾಡ ಹಸುಗಳಾಗಿದ್ದ ಇವು ಗರ್ಭ ಧರಿಸಿ ಚೆನ್ನಾಗಿದ್ದವು. ಆದರೆ, ಭಾನುವಾರ ಇದ್ದಕ್ಕಿದ್ದಂತೆ ಹಸುಗಳು ಸಾವಿಗೀಡಾಗಿವೆ.

ಪಶು ಇಲಾಖೆಯ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸೂಕ್ತ ಪರಿಹಾರ ಕೊಡಿಸುವಂತೆ ಸಂತ್ರಸ್ತರು ಮನವಿ ಮಾಡಿದ್ದಾರೆ.

× Chat with us