ಆಟೋ ಚಾಲಕನನ್ನು ಹತ್ಯೆ ಮಾಡಿದ್ದ ಸ್ನೇಹಿತರು ಅರೆಸ್ಟ್‌

ಮೈಸೂರು: ಆಟೋ ಚಾಲಕ ಮಲ್ಲಿಕಾರ್ಜುನ್ ಹತ್ಯೆ ಸಂಬಂಧ ಆರೋಪಿಗಳಿಬ್ಬರನ್ನು ನರಸಿಂಹರಾಜ ಪೊಲೀಸರು ಬಂಧಿಸಿದ್ದಾರೆ.

ಗಾಂಧಿನಗರದ ಶ್ರೀಧರ್ (45), ಎನ್.ಆರ್.ಮೊಹಲ್ಲಾ ಎಜಿ ಬ್ಲಾಕ್ ನಿವಾಸಿ ಗೋವಿಂದರಾಜು (50) ಬಂಧಿತರು.

ಮೃತ ಮಲ್ಲಿಕಾರ್ಜುನ ಮತ್ತು ಆರೋಪಿಗಳಾದ ಶ್ರೀಧರ್ ಹಾಗೂ ಗೋವಿಂದರಾಜುರವರುಗಳು ಆಟೋ ಚಾಲಕರಾಗಿದ್ದು, ಸ್ನೇತರಾಗಿದ್ದರು. ಮೂವರಿಗೂ ಕುಡಿಯುವ ಅಭ್ಯಾಸದ್ದು, ಕುಡಿದಾಗ ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಳ್ಳುತ್ತಿದ್ದರು. ಜ.10 ರಂದು ಮಲ್ಲಿಕಾರ್ಜುನ ಕುಡಿದು, ಆರೋಪಿಗಳಾದ ಶ್ರೀಧರ್ ಮತ್ತು ಗೋಂವಿದರಾಜು ಜೊತೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಆರೋಪಿಗಳ ತಾಯಿಯ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದ ಕೋಪಗೊಂಡ ಆರೋಪಿಗಳು ಮಲ್ಲಿಕಾರ್ಜುನನನ್ನು ಆಟೋದಲ್ಲಿ ಕೂರಿಸಿಕೊಂಡು ಗಾಂಧಿನಗರದ ೪ನೇ ಕ್ರಾಸ್, ಗರಡಿ ಮನೆ ಹತ್ತಿರ ಕರೆದುಕೊಂಡು ಬಂದು ಹಲ್ಲೆ ಮಾಡಿ, ಆತನನ್ನು ಆಟೋದಿಂದ ಕೆಳಗಿಳಿಸಿ, ಅವನ ಮೇಲೆ ಎರಡು ಬಾರಿ ಆಟೋ ಹತ್ತಿಸಿ, ಕೊಲೆ ಮಾಡಲು ಪ್ರಯತ್ನಿಸಿರುವುದಾಗಿ ತಿಳಿಸಿರುತ್ತಾರೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಮಲ್ಲಿಕಾರ್ಜುನ ಜ.12ರಂದು ಮರಣ ಹೊಂದಿದ್ದಾನೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಡಿಸಿಪಿ ರವರಾದ ಡಾ.ಎ.ಎನ್.ಪ್ರಕಾಶ್‌ಗೌಡ, ನರಸಿಂಹರಾಜ ಭಾಗದ ಎಸಿಪಿ ಶಿವಶಂಕರ್ ರವರ ನೇತೃತ್ವದಲ್ಲಿ ನರಸಿಂಹರಾಜ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅಜರುದ್ದಿನ್, ಪಿಎಸ್‌ಐ ಅನಿಲ್‌ಕುಮಾರ್, ಎಎಸ್‌ಐ ಪಾಪಣ್ಣ, ಸಿಬ್ಬಂದಿ ಗಂಗಾಧರ್, ಶಿವಣ್ಣ, ಮಂಜು ಕಾರ್ಯಕ್ರಚರಣೆಯಲ್ಲಿ ಭಾಗಿಯಾಗಿದ್ದಾರೆ.

× Chat with us