BREAKING NEWS

ಸೆಲೆಬ್ರಿಟಿಗಳ ಖಾತೆಗಳಿಗೆ ಮತ್ತೆ ಬ್ಲ್ಯೂ ಟಿಕ್‌ ನೀಡಿದ ಟ್ವಿಟ್ಟರ್‌

ಹೊಸದಿಲ್ಲಿ : ಸಿನಿಮಾ ಜಗತ್ತಿನ ಅತಿರಥ ಮಹಾರಥರಾದ ಅಮಿತಾಬ್‌ ಬಚ್ಚನ್‌, ರಜನಿಕಾಂತ್‌ ಅವರಿಂದ ಹಿಡಿದು ರಾಜಕೀಯ ಮುಖಂಡ ರಾಹುಲ್‌ ಗಾಂಧಿವರೆಗೆ ಅನೇಕ ಸೆಲೆಬ್ರಿಟಿಗಳಿಗೆ ಟ್ವಿಟ್ಟರ್‌ ಸಂಸ್ಥಾಪಕ ಎಲಾನ್‌ ಮಸ್ಕ್‌ ಅಚ್ಚರಿ ನೀಡಿದ್ದರು. ಟ್ವಿಟ್ಟರ್‌ ಖಾತೆಯ ನೀಲಿ ಗುರುತು ತೆಗೆದು ಹಾಕಿದ್ದ ಕಂಪೆನಿಯು ಮತ್ತೆ ದೃಢೀಕೃತ ಖಾತೆಗಳಿಗೆ ನೀಲಿ ಮುದ್ರೆ ಒತ್ತಿದೆ.

ಭಾರತದ ಅನೇಕ ಪ್ರಮುಖ ರಾಜಕಾರಣಿಗಳು, ಕ್ರಿಕೆಟಿಗರು, ಉದ್ಯಮಿಗಳು, ಪತ್ರಕರ್ತರು ಹಾಗೂ ಗಣ್ಯರ ಅಧಿಕೃತ ಖಾತೆಗಳ ಗುರುತುಗಳನ್ನು ತೆಗೆದು ಹಾಕಿದ್ದುದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಟ್ವಿಟ್ಟರ್‌ ಮುಖ್ಯಸ್ಥ ಎಲಾನ್‌ ಮಸ್ಕ್‌ ಜಾರಿಗೆ ತಂದಿದ್ದ ಹೊಸ ನಿಯಮದ ಅನುಸಾರ ಚಂದಾದಾರ ಶುಲ್ಕವನ್ನು ಭರಿಸದೇ ಇರುವ ಖಾತೆಗಳ ನೀಲಿ ‘ಸರಿ’ (ರೈಟ್‌) ಗುರುತನ್ನು ತೆಗೆದು ಹಾಕುವ ಕಾರ್ಯವನ್ನು ಕಂಪನಿ ಕಳೆದ ವಾರವಷ್ಟೇ ಆರಂಭಿಸಿತ್ತು.

ಆದರೆ ಇದ್ದಕ್ಕಿದ್ದಂತೆ ಒಂದೇ ದಿನದಲ್ಲಿ ಎಲ್ಲಾ ಸೆಲೆಬ್ರಿಟಿಗಳ ಖಾತೆಗಳಿಗೆ ಮತ್ತೆ ನೀಲಿ ಗುರುತು ಅಳವಡಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಪ್ರಸಿದ್ಧ ಕ್ರಿಕೆಟಿಗರಾದ ಸಚಿನ್‌ ತೆಂಡೂಲ್ಕರ್‌, ವಿರಾಟ್‌ ಕೊಹ್ಲಿ ಅವರ ಖಾತೆಗಳಿಗೂ ಕೂಡ ತೆಗೆದು ಹಾಕಲಾಗಿದ್ದ ನೀಲಿ ಸರಿ ಗುರುತುಗಳನ್ನು ಮತ್ತೆ ಮರು ಸ್ಥಾಪಿಸಲಾಗಿದೆ. ಆದರೆ ಚಂದಾದಾರ ಶುಲ್ಕವನ್ನು ಭರಿಸಿದ ಕಾರಣಕ್ಕಾಗಿ ಇಂತಹ ಗುರುತುಗಳನ್ನು ಮರು ಸ್ಥಾಪನೆ ಮಾಡಲಾಗಿದೆಯೇ ಎಂಬುದರ ಬಗೆಗೆ ಖಚಿತವಾಗಿಲ್ಲ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾಅವರ ಖಾತೆಯಿಂದ ಅಳಿಸಿ ಹಾಕಲಾಗಿದ್ದ ನೀಲಿ ಗುರುತು ಮತ್ತೆ ಅಳವಡಿಕೆಯಾದ ಬಗೆಗೆ ಸ್ವತಃ ಟ್ವೀಟ್‌ ಮಾಡಿ, ತಾವು ಯಾವುದೇ ಶುಲ್ಕ ಭರಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. “ನನಗೂ ಶುಲ್ಕ ಭರಿಸುವಂತೆ ಕೋರಲಾಗಿತ್ತು. ಆದರೆ ನಾನು ಯಾವುದೇ ಹಣ ಪಾವತಿಸಿಲ್ಲ, ಬಹುಶಃ ನನ್ನ ಹಣವನ್ನು ಮಸ್ಕ್‌ ಭರಿಸಿದರೇ?” ಎಂದು ಅಬ್ದುಲ್ಲಾ ಟ್ವೀಟ್‌ ಮಾಡಿದ್ದಾರೆ.

ನೋಬೆಲ್‌ ಪ್ರಶಸ್ತಿ ಪುರಸ್ಕೃತ ಮಲಾಲಾ ಯೂಸುಫ್‌ಜಾಯ್‌ ಕೂಡ ತಮ್ಮ ಖಾತೆಯ ನೀಲಿ ಗುರುತು ವಾಪಸ್‌ ಬಂದಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. “ಏನಾಗಿದೆ ಎಂಬುದು ಗೊತ್ತಿಲ್ಲ. ನೀಲಿ ಗುರುತು ವಾಪಸ್‌ ಬಂದಿದೆ, ಹೀಗಾಗಿ ನಾನೇ ಮಲಾಲಾ ಎಂಬುದು ಎಲ್ಲರಿಗೂ ಗೊತ್ತಾಗಿದೆ,” ಚಟಾಕಿ ಹಾರಿಸಿದ್ದಾರೆ.

ಆದರೆ ಇಡೀ ಬೆಳವಣಿಗೆ ಕುರಿತಂತೆ ಟ್ವಿಟ್ಟರ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೂಲಗಳ ಪ್ರಕಾರ, ಪ್ರಮುಖ ವ್ಯಕ್ತಿಗಳು ಮತ್ತು ಸಂಘಟನೆಗಳು ಖಾತೆಗಳ ಅಧಿಕೃತ ಖಾತೆಗಳನ್ನು ಪತ್ತೆ ಮಾಡಿ, ಅವುಗಳಿಗೆ ನೀಲಿ ಗುರುತು ನೀಡುವ ಪ್ರಕ್ರಿಯೆಯಲ್ಲಿ ಕಂಪನಿ ನಿರತವಾಗಿದೆ ಎಂದು ಹೇಳಲಾಗಿದೆ.

ಸೋಜಿಗದ ಸಂಗತಿ ಎಂದರೆ, ಈಗಾಗಲೇ ನಿಧನ ಹೊಂದಿದ ಜಾಗತಿಕ ಗಣ್ಯ ವ್ಯಕ್ತಿಗಳಾದ ಅಮೆರಿಕದ ಖ್ಯಾತ ನಟ ಚಾಡ್ವಿಕ್‌ ಬೋಸ್‌ಮನ್‌, ಖ್ಯಾತ ಬಾಸ್ಕೆಟ್‌ ಬಾಲ್‌ ಆಟಗಾರ ಅಮೆರಿಕದ ಕೊಬೆ ಬ್ರ್ಯಾಂಟ್‌ ಮತ್ತು ಗಾಯಕ ಮತ್ತು ಡಾನ್ಸರ್‌ ಮೈಕೆಲ್‌ ಜಾಕ್ಸನ್‌ ಅವರ ಖಾತೆಗಳಿಗೂ ಮತ್ತೆ ನೀಲಿ ಗುರುತು ಅಳವಡಿಸಲಾಗಿದೆ.

ಶುಲ್ಕ ಭರಿಸದೇ ಇರುವ ಖಾತೆಗಳ ನೀಲಿ ಗುರುತು ತೆಗೆದು ಹಾಕುವ ಪ್ರಕ್ರಿಯೆಯನ್ನು ಟ್ವಿಟ್ಟರ್‌ ಏಪ್ರಿಲ್‌ 20ರಿಂದ ಆರಂಭಿಸಿತ್ತು. ಅಮೆರಿಕದ ಬರಹಗಾರ ಸ್ಪೀಫನ್‌ ಕಿಂಗ್‌, ಖ್ಯಾತ ಬಾಸ್ಕೆಟ್‌ ಬಾಲ್‌ ಆಟಗಾರ ಲೆಬಾರ್ನ್‌ ಜೇಮ್ಸ್‌ ಮತ್ತು ಪ್ರಸಿದ್ಧ ನಟ ವಿಲಿಯಂ ಶಾಟ್ನರ್‌ ಅವರ ಖಾತೆಗಳ ನೀಲಿ ಗುರುತು ಉಳಿಸಲು ಸ್ವತಃ ಎಲಾನ್‌ ಮಸ್ಕ್‌ ಶುಲ್ಕ ಭರಿಸುವುದಾಗಿ ಘೋಷಿಸಿದ್ದರು.

lokesh

Recent Posts

ಪ್ರಧಾನಿ ವಿರುದ್ಧ ಅವಹೇಳನಕಾರಿ ವೀಡಿಯೋ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಯದುವೀರ್‌ ಆಗ್ರಹ

ನಾಳೆಯಿಂದ ಬಿಜೆಪಿ ಪ್ರತಿಭಟನೆ: ಸಂಸದರ ಮಾಹಿತಿ ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ…

2 hours ago

ಗೃಹ ಬಳಕೆ, ಕೈಗಾರಿಕೆಗೆ ದಿನದ 24 ಗಂಟೆಯೂ ವಿದ್ಯುತ್

ಬೆಳಗಾವಿ : ಮುಂದಿನ ಮಾರ್ಚ್‌ನಿಂದ ಎರಡೂವರೆ ಸಾವಿರ ಮೆಗಾ ವ್ಯಾಟ್ ಸೌರಶಕ್ತಿ ವಿದ್ಯುತ್ ಸೇರ್ಪಡೆಯಾಗುತ್ತಿದ್ದು, ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ…

2 hours ago

ಬೆಳಗಾವಿ ಅಧಿವೇಶನದಲ್ಲೂ ನಟ ದರ್ಶನ್‌ ಬಗ್ಗೆ ಚರ್ಚೆ : ಏನದು?

ಬೆಳಗಾವಿ : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ರಾಜ್ಯಾಥಿತ್ಯ ಸೌಲಭ್ಯಗಳು ಸಿಗುತ್ತಿರುವ ಬಗ್ಗೆ ವಿಧಾನಪರಿಷತ್‌ನಲ್ಲಿ ಪ್ರಸ್ತಾಪವಾಯಿತು. ಶೂನ್ಯವೇಳೆಯಲ್ಲಿ ಸದಸ್ಯ ಧನಂಜಯ್…

2 hours ago

ದಿ ಡೆವಿಲ್‌ ಚಿತ್ರದ ವಿಮರ್ಶೆ ಹಂಚಿಕೊಂಡ ಪತ್ನಿ ವಿಜಯಲಕ್ಷ್ಮಿ….!

ಬೆಂಗಳೂರು : ನಟ ದರ್ಶನ್ ಅವರ ಅನುಪಸ್ಥಿತಿಯಲ್ಲಿ ದಿ ಡೆವಿಲ್ ಸಿನಿಮಾ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಅಭಿಮಾನಿಗಳು, ದರ್ಶನ್…

2 hours ago

ಸರ್ಕಾರಿ ಶಾಲೆಗಳಿಗೆ ಗುಡ್‌ನ್ಯೂಸ್‌ : ಶಾಲಾ ಕೊಠಡಿ ದುರಸ್ಥಿಗೆ ರೂ.360 ಕೋಟಿ ಬಿಡುಗಡೆ

ಬೆಳಗಾವಿ : ರಾಜ್ಯದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ…

2 hours ago

ಹೊಸ ತಾಲ್ಲೂಕುಗಳಿಗೆ ಸದ್ಯಕ್ಕಿಲ್ಲ ಆಸ್ಪತ್ರೆ ಭಾಗ್ಯ

ಬೆಳಗಾವಿ : ರಾಜ್ಯದಲ್ಲಿ ಹೊಸ ತಾಲ್ಲೂಕುಗಳಲ್ಲಿ ಸದ್ಯಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಮಂಜೂರಾತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ…

2 hours ago