ಮೈಸೂರು: ಮಾಜಿ ಶಾಸಕ ದಿ. ವೇದಾಂತ ಹೆಮ್ಮಿಗೆ ಮನೆ ಮುಂದೆ ಕಾರಿನ ಮೇಲೆ ಉರುಳಿ ಬಿದ್ದ ಮರ!

ಮೈಸೂರು: ಕುವೆಂಪುನಗರದ ವಿಜಯಾ ಬ್ಯಾಂಕ್‌ ವೃತ್ತ ಬಳಿಯ ಮಾಜಿ ಶಾಸಕ ದಿವಂಗತ ವೇದಾಂತ ಹೆಮ್ಮಿಗೆ ಅವರ ಮನೆ ಮುಂಭಾಗ ಮರವೊಂದು ಕಾರಿನ ಮೇಲೆ ಬಿದ್ದಿರುವ ಘಟನೆ ನಡೆದಿದೆ.

ನಗರದಲ್ಲಿ ಸತತ ಎರಡು ದಿನಗಳಿಂದ ಸುರಿದ ಭಾರಿ ಮಳೆ ಸುರಿಯಿತು. ಪರಿಣಾಮವಾಗಿ ಮರ ಉರುಳಿಬಿದ್ದಿದೆ. ಮರ ಕಾರಿನ ಮೇಲೆ ಬಿದ್ದು, ಕಾರು ಜಖಂಗೊಂಡಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮೈಸೂರು ಮಹಾನಗರ ಪಾಲಿಕೆಯ ಅಭಯ ತಂಡ ಮರ ತೆರವು ಕಾರ್ಯಾಚರಣೆ ನಡೆಸುತ್ತಿದೆ.

× Chat with us