ಬೆಂಗಳೂರು : ವಿರೋಧ ಪಕ್ಷಗಳ ಹಲವು ಆರೋಪಗ ನಡುವೆಯೂ ಕಾಂಗ್ರೆಸ್ ಸರ್ಕಾರದಲ್ಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಜೋರಾಗಿದೆ. ನೆನ್ನೆ ವರ್ಗಾವಣೆ ಮಾಡಿದ್ದ ಕೆಲ ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆಗೆ ಸರ್ಕಾರ ತಡೆ ಹಿಡಿದೆ.
ನೆನ್ನೆ ಬರೋಬ್ಬರಿ 211 ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಈ ಪೈಕಿ 11 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆಯನ್ನು ಸರ್ಕಾರ ಏಕಾಏಕಿ ಇಂದು ಬೆಳಗ್ಗೆ ಏಕಾಏಕಿ ತಡೆ ಹಿಡಿದಿದ್ದು, ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಯಾವೆಲ್ಲಾ ಇನ್ಸ್ಪೆಕ್ಟರ್ಗಳ ವರ್ಗಾವಣೆಗೆ ತಡೆ?
1.ಜಗದೀಶ್ – ಕೆ ಎಸ್ ಲೇಔಟ್ ಠಾಣೆ
2.ವಜ್ರಮುನಿ – ಕೆ ಆರ್ ಮಾರ್ಕೆಟ್
3.ರವಿಕುಮಾರ್ – ಪುಟ್ಟೇನಹಳ್ಳಿ
4.ಅನಿಲ್‌ಕುಮಾರ್ – ಮಲ್ಲೇಶ್ವರಂ
5.ಜಿಗಣಿ – ಎಡ್ವಿನ್ ಪ್ರದೀಪ್
6.ರವಿ ಗೌಡ ಬಿ- ಯಶವಂತಪುರ ಟ್ರಾಫಿಕ್ ಸಂಚಾರ
7.ಯಶತಪುರ ಲಾ ಅಂಡ್ ಆರ್ಡರ್ – ಧನಂಜಯ್
8.ಲಕ್ಷ್ಮಣ್ ಜೆ – ನಂದಿನಿ ಲೇಔಟ್ ಪೊಲೀಸ್
9.ಅಶತ್ಥಗೌಡ- ಜಾನ್ಞಭಾರತಿ ಪೊಲೀಸ್ ಠಾಣೆ
10.ಗೋವಿಂದರಾಜು – ಪಿಣ್ಯ ಪೊಲೀಸ್ ಠಾಣೆ.
11.ಕೃಷ್ಣಕುಮಾರ್- ಬೇಗೂರು ಪೊಲೀಸ್ ಠಾಣೆ
ಒಟ್ಟು 11 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆಗೆ ತಡೆ ನೀಡಿ ಡಿಜಿಐಜಿಪಿ ಕಚೇರಿಯಿಂದ ಆದೇಶ ಹೊರಬಿದ್ದಿದೆ.
ನೆನ್ನೆ ಒಂದೇ ದಿನ 211 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಬಹುತೇಕ ಜಿಲ್ಲೆ, ಸಿಸಿಬಿ , ಗುಪ್ತ ವಾರ್ತೆಯ ಪೊಲೀಸ್ ಇನ್ ಸ್ಪೆಕ್ಟರ್‌ಗಳ ವರ್ಗಾವಣೆ ಆಗಿತ್ತು. ಇದರಲ್ಲಿ ಇದೀಗ ಕೆಲವರ ವರ್ಗಾವಣೆಯನ್ನು ದಿಢೀರ್ ತಡೆಹಿಡಿದಿರುವುದು ಚರ್ಚೆ ಹುಟ್ಟುಹಾಕಿದೆ.
ಮಹಾದೇಶ್ ಎಂ ಗೌಡ ಹನೂರು: ತಮ್ಮ ಊರಿನಿಂದ ದೂರದಲ್ಲಿರುವ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಕೋರಿ…
ಬಿ.ಎಸ್.ವಿನಯ್ ಮೊನ್ನೆ ಯಳಂದೂರಿನ ಬೀದಿಯಲ್ಲಿ ಸಾಗುತ್ತಿದ್ದಾಗ ಬಳೆಮಂಟಪದ ಮುಂದೆ ಪರಿಚಿತ ಹಿರಿಯರೊಬ್ಬರು ಎದುರಾದರು. ‘ಯಜಮಾನರೇ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?’ ಕೇಳಿದರೆ…
ವಿನುತ ಕೋರಮಂಗಲ ನಮ್ಮ ಹಟ್ಟಿಯಿಂದ ನಾಲ್ಕೈದು ಕಿ.ಮೀ. ದೂರವಿರುವ ನಮ್ಮೂರಿನ ಕೆರೆಯ ಅಂಗಳಕ್ಕೆ ನಾವೇನು ನಡೆದುಕೊಂಡು ಹೋಗುತ್ತಿರಲಿಲ್ಲ. ಗಂಗೆ ಎಂದು…
ಅಕ್ಷತಾ ಖಾಲಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು, ಪದ ಮಿತಿಯನ್ನು ಬೆರಳು ಲೆಕ್ಕದಲ್ಲಿ ಎಣಿಸಿ, ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ…
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…