ಅಕ್ರಮವಾಗಿ ಜಾನುವಾರುಗಳ ಸಾಗಾಣೆ; ನಾಲ್ವರ ಬಂಧನ

ನಂಜನಗೂಡು: ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಮೂರು ಜಾನುವಾರುಗಳು ಹಾಗೂ ಸಾಗಾಣೆಗೆ ಬಳಸಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಅಜ್ಮಲ್ ಖಾನ್ (೩೬), ಜಾವಿದ್ ಪಾಷಾ (೩೬), ಮುಕ್ರಂಪಾಷ (೩೧) ಹಾಗೂ ಸೈಯದ್ ಜಾವದ್ (೩೫) ಬಂಧಿತರು.

ತಾಲ್ಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ಆರೋಪಿಗಳನ್ನು ಸೆರೆಹಿಡಿಯಲಾಯಿತು. ಇವರು ಜಾನುವಾರುಗಳನ್ನು ಕದಿಯಲು ಹೊಂಚು ಹಾಕುತ್ತಿದ್ದರು. ಕದ್ದ ಹಸುಗಳನ್ನು ಮೈಸೂರಿನ ರಾಜೀವ್ ನಗರದಲ್ಲಿ ಅವಿತಿಟ್ಟಿದ್ದರು ಎನ್ನಲಾಗಿದೆ. ಪೊಲೀಸರು ರಸ್ತೆ ಗಸ್ತಿನಲ್ಲಿದ್ದ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us