ಒಂಟಿ ಸಲಗ ದಾಳಿಯಿಂದ ಟ್ರ್ಯಾಕ್ಟರ್‌, ಕಾರು ಜಖಂ

ಮೈಸೂರು: ಒಂಟಿ ಸಲಗ ದಾಳಿಯಿಂದಾಗಿ ಟ್ರ್ಯಾಕ್ಟರ್‌ ಮತ್ತು ಕಾರು ಜಖಂಗೊಂಡಿರುವ ಘಟನೆ ನಡೆದಿದೆ.

ಮುದಗನೂರು ಗ್ರಾಮದಲ್ಲಿ ಶ್ರೀನಿವಾಸ್‌ ಎಂಬವರಿಗೆ ಸೇರಿದ ಟ್ರಾಕ್ಟರ್ ಮತ್ತು ಚಿಕ್ಕಹೆಜ್ಜೂರು ಹಾಡಿಯಲ್ಲಿ ಭಾಸ್ಕರ್‌ ಎಂಬವರಿಗೆ ಸೇರಿದ ಕಾರು ಆನೆ ದಾಳಿಯಿಂದ ಜಖಂಗೊಂಡಿದೆ.

ನಾಗಾಪುರ ವುಡ್ ಲಾಡ್ ಹತ್ತಿರ ಒಂಟಿ ಸಲಗ ಬೀಡು ಬಿಟ್ಟಿದೆ. ಅರಣ್ಯ ಇಲಾಖೆ ಸಿಬ್ಬಂದಿ ಆನೆ ಓಡಿಸುವ ಕಾರ್ಯಾಚರಣೆ ಮುಂದುವರಿಸಿದ್ದಾರೆ.

× Chat with us