ಸಕ್ಕರೆ ನಾಡಿನಲ್ಲೊಂದು ಕಹಿ ಘಟನೆ; ಇಬ್ಬರು ಸಾವು; ಐವರಿಗೆ ಗಾಯ!

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೀರವಳ್ಳಿ ಬಳಿ ಟ್ರ್ಯಾಕ್ಟರ್ ಮಗುಚಿ ಇಬ್ಬರು ಮೃತಪಟ್ಟು ಐವರಿಗೆ ಗಾಯಗೊಂಡಿರುವ ಘಟನೆ ಇಂದು ಬುಧವಾರ ನಸುಕಿನ ಜಾವ ನಡೆದಿದೆ.

ಶ್ರೀ ಚಂದಗೋಳಮ್ಮ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ವಾಪಸ್ಸು ತೆರಳುವಾಗ ಅಪಘಾತ ಸಂಭವಿಸಿದೆ. ಮೃತರನ್ನು ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲ್ಲೂಕಿನ ತಂದ್ರೆ ಕೊಪ್ಪಲು ಗ್ರಾಮದ ರಮೇಶ್(44) ಹಾಗೂ ಧ್ರುವ(11) ಎಂದು ಗುರುತಿಸಲಾಗಿದೆ.

ಕೆ.ಆರ್. ಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಪಘಾತದಲ್ಲಿ ಐವರಿಗೆ ಗಾಯವಾಗಿದ್ದು ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

× Chat with us