ಪ್ಯಾರಾಲಿಂಪಿಕ್ಸ್: ಶೂಟಿಂಗ್‍ನಲ್ಲಿ ಮನೀಶ್‍ಗೆ ಚಿನ್ನ, ಸಿಂಗರಾಜ್‍ಗೆ ಬೆಳ್ಳಿ ಪದಕ

ಟೋಕಿಯೊ: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಉತ್ತಮ ಪ್ರದರ್ಶನ ಮುಂದುವರಿದಿದೆ. ಶನಿವಾರ P4​​​ ಮಿಶ್ರ 50 ಮೀಟರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಚಿನ್ನ ಮತ್ತು ಸಿಂಗ್​ರಾಜ್​ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

19 ವರ್ಷ ಪ್ರಾಯದ ಮನೀಶ್ ವಿಶ್ವ ದಾಖಲೆಯ 218.2 ಪಾಯಿಂಟ್​ನೊಂದಿಗೆ ಚಿನ್ನದ ಪದಕ ಗೆದ್ದರು. ಸಿಂಗ್​ರಾಜ್ 216.7 ಪಾಯಿಂಟ್​ನೊಂದಿಗೆ ಎರಡನೇ ಸ್ಥಾನ ಪಡೆದು ಬೆಳ್ಳಿ ತಮ್ಮದಾಗಿಸಿಕೊಂಡಿದ್ದಾರೆ. ರಷ್ಯಾದ ಶೂಟರ್​ ಸೆರ್ಗೆ, 196.8 ಅಂಕ ಗಳಿಸುವುದರೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟರು.

× Chat with us