ಪ್ಯಾರಾಲಿಂಪಿಕ್ಸ್‌: ಜಾವೆಲಿನ್‌ ಎಸೆತದಲ್ಲಿ ದೇವೇಂದ್ರಗೆ ಬೆಳ್ಳಿ, ಸುಂದರ್‌ ಸಿಂಗ್‌ಗೆ ಕಂಚು

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಸೋಮವಾರ ಭಾರತಕ್ಕೆ ಪದಕಗಳ ಸುರಿಮಳೆಯೇ ಹರಿದುಬರುತ್ತಿದೆ. ಜಾವೆಲಿನ್‌ ಎಸೆತದಲ್ಲಿ ದೇವೇಂದ್ರ ಜಜಾರಿಯಾ ಬೆಳ್ಳಿ ಪದಕ ಹಾಗೂ ಸುಂದರ್‌ ಸಿಂಗ್‌ ಗುರ್ಜಾರ್‌ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಆ ಮೂಲಕ ಸೋಮವಾರ ಬೆಳಿಗ್ಗೆಯ ಹೊತ್ತಿಗೆ ಭಾರತಕ್ಕೆ ಒಟ್ಟು 1 ಚಿನ್ನ, 2 ಬೆಳ್ಳಿ ಹಾಗೂ 1 ಕಂಚು ಲಭಿಸಿದೆ.

ದೇವೇಂದ್ರ ಜಜಾರಿಯಾ ಅವರು 64.35 ಮೀಟರ್‌ ಜಾವೆಲಿನ್‌ ಎಸೆದು ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಸುಂದರ್‌ ಸಿಂಗ್‌ 64.01 ಮೀಟರ್‌ ಎಸೆದು ಕಂಚು ಗೆದ್ದಿದ್ದಾರೆ.

ಶ್ರೀಲಂಕಾದ ದಿನೇಶ್‌ ಮುಡಿಯಾನ್ಸೆಲೇಜ್ 67.79 ಮೀಟರ್‌ ಜಾವೆಲಿನ್‌ ಎಸೆದು ವಿಶ್ವ ದಾಖಲೆ ಬರೆಯುವುದರೊಂದಿಗೆ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

× Chat with us