ಟೋಕಿಯೋ ಒಲಿಂಪಿಕ್ಸ್‌: ಹಾಕಿಯಲ್ಲಿ ಬ್ರಿಟನ್‌ ವಿರುದ್ಧ ಸೋಲು, ಭಾರತ ಮಹಿಳಾ ತಂಡ ಕೈತಪ್ಪಿದ ಕಂಚು

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಮೂರನೇ ಸ್ಥಾನಕ್ಕಾಗಿ ಬ್ರಿಟನ್‌ ವಿರುದ್ಧ ನಡೆದ ಪಂದ್ಯದಲ್ಲಿ 3-4 ಅಂತರದಲ್ಲಿ ಭಾರತದ ಮಹಿಳಾ ಹಾಕಿ ತಂಡ ಸೋತಿದೆ.

ಮೊದಲ ಕ್ವಾರ್ಟರ್‌ನಲ್ಲಿ ಇತ್ತಂಡಗಳಿಂದ ಸಮಬಲದ ಹೋರಾಟ ಕಂಡುಬಂದಿತ್ತು. ಆದರೆ ದ್ವಿತೀಯ ಕ್ವಾರ್ಟರ್‌ನಲ್ಲಿ ಬ್ರಿಟನ್ 2-0 ಗೋಲುಗಳ ಮುನ್ನಡೆ ದಾಖಲಿಸಿತ್ತು. ನಂತರ ಭಾರತದ ಮಹಿಳಾ ಆಟಗಾರ್ತಿಯರು ಗುರ್ಜಿತ್ ಕೌರ್ ಎರಡು ಗೋಲುಗಳ ನೆರವಿನಿಂದ ಸಮಬಲ ದಾಖಲಿಸಿತ್ತು. ಬಳಿಕ ವಂದನಾ ಕಟಾರಿಯಾ ಗೋಲು ಬಾರಿಸುವುದರೊಂದಿಗೆ ಮೊದಲಾರ್ಧದಲ್ಲಿ 3-2ರ ಅಂತರದ ಮುನ್ನಡೆ ದಾಖಲಿಸಿತ್ತು.

ಆದರೆ, ಬ್ರಿಟನ್ ನಾಯಕಿ ಸಮಬಲದ ಗೋಲು ದಾಖಲಿಸಿದರು. ಕೊನೆಯ ಕಾರ್ಟರ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಿದ ಬ್ರಿಟನ್ ಮಗದೊಂದು ಗೋಲು ಬಾರಿಸಿ 4-3 ಗೋಲುಗಳ ಗೆಲುವು ದಾಖಲಿಸಿತು. ಕೊನೆಯ ಹಂತದಲ್ಲಿ ಭಾರತ ಶಕ್ತಿಮೀರಿ ಪ್ರಯತ್ನಿಸಿದರೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಸೋಲಿನ ಆಘಾತದಿಂದ ಭಾರತೀಯ ಆಟಗಾರ್ತಿಯರು ಮೈದಾನದಲ್ಲೇ ಕಣ್ಣೀರಿಟ್ಟರು.

× Chat with us