ಟೋಕಿಯೋ ಒಲಿಂಪಿಕ್ಸ್‌: ಭಾರತ ಮಹಿಳಾ ಹಾಕಿ ತಂಡಕ್ಕೆ ಮತ್ತೊಂದು ಜಯ

ಟೋಕಿಯೋ: ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡಕ್ಕೆ ಮತ್ತೊಂದು ಜಯ ಲಭಿಸಿದ್ದು, ಕ್ವಾರ್ಟರ್‌ ಫೈನಲ್‌ ಆಸೆಯನ್ನು ಜೀವಂತವಾಗಿರಿಸಿದೆ.

ಭಾರತ ತಂಡ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 4-3 ಅಂತರದ ಗೆಲುವು ದಾಖಲಿಸಿದೆ.
ಐರ್ಲೆಂಟ್ ಹಾಗೂ ಗ್ರೇಟ್ ಬಿಟನ್ ನಡುವಣ ಪಂದ್ಯದಲ್ಲಿ ಐರ್ಲೆಂಡ್ ತಂಡ ಸೋತರೆ ಅಥವಾ ಪಂದ್ಯ ಡ್ರಾ ಆದರೆ ಭಾರತ ಮಹಿಳಾ ತಂಡ ಚೊಚ್ಚಲ ಬಾರಿಗೆ ಕ್ವಾರ್ಟರ್​ ಫೈನಲ್ ಪ್ರವೇಶಿಸಲಿದೆ.

ರೋಚಕ ಪಂದ್ಯದಲ್ಲಿ ಭಾರತಕ್ಕೆ ಪಂದ್ಯ ಆರಂಭವಾದ ಕೆಲವೇ ನಿಮಿಷಗಳಲ್ಲಿ ವಂದನಾ ಕ್ಯಾತ್ರಿಯಾ ಮೊದಲ ಅಂಕ ತಂದುಕೊಟ್ಟರು. ಇದರ ಬೆನ್ನಲ್ಲೇ ಆಫ್ರಿಕಾ ಕೂಡ ಮೊದಲ ಗೋಲು ಬಾರಿಸಿತು. ಮೊದಲ ಕ್ವಾರ್ಟರ್ ವೇಳೆಗೆ ಉಭಯ ತಂಡಗಳು ತಲಾ 1-1ರ ಸಮಬಲ ಸಾಧಿಸಿದ್ದವು. ನಂತರ ಮತ್ತೊಮ್ಮೆ ವಂದನಾ ಅವರು ಭಾರತಕ್ಕೆ ಎರಡನೇ ಗೋಲು ಬಾರಿಸಿ ಮುನ್ನಡೆ ಸಾಧಿಸುವಂತೆ ಮಾಡಿದರು. ಸ್ವಲ್ಪ ಹೊತ್ತಿನಲ್ಲಿ ಆಫ್ರಿಕಾದ ಎರಿನ್ ಹಂಟರ್ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಭಾರತಕ್ಕೆ ಮೂರನೇ ಗೋಲು ಪೆನಾಲ್ಟಿ ಕಾರ್ನರ್ ಮೂಲಕ ಬಂತು. ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸುವ ಮೂಲಕ ವಂದಾನ ಹೊಸ ಇತಿಹಾಸ ಬರೆದರು.

× Chat with us