ಟೋಕಿಯೋ ಒಲಿಂಪಿಕ್ಸ್‌: ಗಾಲ್ಫ್‌ನಲ್ಲಿ ಫೈನಲ್‌ ಪ್ರವೇಶಿಸಿದ ಬಾಗಲಕೋಟೆಯ ಅದಿತಿ

ಬಾಗಲಕೋಟೆ: ಜಮಖಂಡಿ ಮೂಲದ ಅದಿತಿ ಅಶೋಕ್ ಟೋಕಿಯೋ ಒಲಿಂಪಿಕ್ಸ್‌ನ ಗಾಲ್ಫ್ ಆಟದಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಅದಿತಿ ಕುಟುಂಬ ವರ್ಗದವರು ಹಾಗೂ ಜಿಲ್ಲೆಯ ಕ್ರೀಡಾ ಅಭಿಮಾನಿಗಳು ಅದಿತಿ ಪದಕ ಗೆಲ್ಲಲಿ ಎಂದು ಹಾರೈಸುತ್ತಿದ್ದಾರೆ.

ಗಾಲ್ಫರ್‌ ಅದಿತಿ ತಂದೆ ಅಶೋಕ ಗುಡ್ಲಮನಿ ಜಮಖಂಡಿಯವರು. ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಫೈನಲ್‌ ಪ್ರವೇಶಿಸಿರುವ ಅದಿತಿ ಬಾಗಲಕೋಟೆ ಜಿಲ್ಲೆಯ ಜನರಲ್ಲಿ ಹೆಮ್ಮೆಯ ಭಾವ ಮೂಡಿಸಿದ್ದಾರೆ.

× Chat with us