ಟೋಕಿಯೋ ಒಲಿಂಪಿಕ್ಸ್‌: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ದೀಪಕ್‌ ಪೂನಿಯಾ, ರವಿ ದಹಿಯಾ

(ದೀಪಕ್‌ ಪೂನಿಯಾ)

ಟೋಕಿಯೋ: ಭಾರತದ ಕುಸ್ತಿಪಟುಗಳಾದ ದೀಪಕ್ ಪುನಿಯಾ, ರವಿ ದಹಿಯಾ ಸೆಮಿ ಫೈನಲ್​ಗೆ ಪ್ರವೇಶ ಪಡೆದಿದ್ದಾರೆ.

ಪುರುಷರ 57 ಕೆಜಿ ವಿಭಾಗದಲ್ಲಿ ರವಿ ದಹಿಯಾ ಮತ್ತು 86 ಕೆಜಿ ವಿಭಾಗದಲ್ಲಿ ದೀಪಕ್ ಪೂನಿಯಾ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದರು.

ರವಿ ಅವರು ಫ್ರೀ ಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಕ್ವಾರ್ಟರ್ ಫೈನಲ್​ನಲ್ಲಿ ಬಲ್ಜೆರಿಯಾದ ಜಾರ್ಗೀ ವಂಗೆಲೊವ್ ಎದುರು 14-4 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್‌​ಗೆ ಲಗ್ಗೆಯಿಟ್ಟಿದ್ದಾರೆ.

ಕುಸ್ತಿಪಟು ದೀಪಕ್‌ ಪುನಿಯಾ ಕೂಡಾ ಚೀನಾದ ಶೂಶೆನ್ ಲಿನ್ ವಿರುದ್ಧ 6-3ರಲ್ಲಿ ರೋಚಕ ಗೆಲುವು ದಾಖಲಿಸಿದರು.

× Chat with us