ಟೋಕಿಯೋ ಒಲಿಂಪಿಕ್ಸ್‌: ಡಿಸ್ಕಸ್‌ ಥ್ರೋ- ಫೈನಲ್‌ ಪ್ರವೇಶಿಸಿದ ಕಮಲ್‌ಪ್ರೀತ್‌

ಟೋಕಿಯೋ: ಮಹಿಳೆಯರ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಭಾರತದ ಕಮಲ್‌ಪ್ರೀತ್‌ ಕೌರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕೌರ್‌ 64 ಮೀ. ಎಸೆದು ಫೈನಲ್‌ ಪ್ರವೇಶಿಸಿ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದಾರೆ.

ಕಮಲ್​ಪ್ರೀತ್ ಅವರು ಮೊದಲ ಪ್ರಯತ್ನದಲ್ಲಿ 6029 ಮೀ., ಎರಡನೇ ಪ್ರಯತ್ನದಲ್ಲಿ 63.97 ಮೀ. ಮತ್ತು ಅಂತಿಮ ಪ್ರಯತ್ನದಲ್ಲಿ 64.00 ಮೀಟರ್ ಎಸೆದು ಅತ್ಯುತ್ತಮ ಪ್ರದರ್ಶನ ನೀಡಿದರು. ಆಗಸ್ಟ್ 2 ರಂದು ಫೈನಲ್ ಪಂದ್ಯ ನಡೆಯಲಿದೆ.

× Chat with us