ಜಿಲ್ಲೆಯಲ್ಲಿಂದು 211 ಮಂದಿಗೆ ಸೋಂಕು; 6 ಮಂದಿ ಮೃತ!

ಮೈಸೂರು: ಜಿಲ್ಲೆಯಲ್ಲಿ ಬುಧವಾರ 211 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಇದೇ ವಳೆ 275 ಮಂದಿ ಗುಣಮುಖರಾಗಿರುವುದು ಕಂಡುಬಂದಿದೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 1,70,362ಕ್ಕೆ ಏರಿಕೆಯಾಗಿದ್ದು, ಅವರಲ್ಲಿ 1,65,479 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 2256 ಮಂದಿ ಮೃತಪಟ್ಟಿದ್ದು, 2,627 ಸಕ್ರೀಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.

 

× Chat with us