ಮೈಸೂರು: ಶಾಪ್‌ನಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳ ಬಂಧನ

ಮೈಸೂರು: ನಗರದ ವರ್ಕ್ಸ್ ಶಾಪ್‌ವೊಂದರ ರೋಲಿಂಗ್ ಶೆಟ್ಟರ್‌ನ ಬೀಗ ಒಡೆದು 20,೫೦೦ ರೂ. ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದ ಮೂವರು ಆರೋಪಿಗಳನ್ನು ಮೈಸೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ನಗರದ ಅಜೀಜ್ ಸೇಠ್ ಬ್ಲಾಕ್‌ನ ತೌಸೀಫ್ ಖಾನ್, ಹನುಮಂತನಗರದ ಮಹಮ್ಮದ್ ಸಿದ್ದಿಕ್, ಲಷ್ಕರ್ ಮೊಹಲ್ಲಾದ ಮಹಮದ್ ಅಲಿ ಬಂಧಿತರು. ಜು.18 ರಂದು ರಾತ್ರಿ ರಮ್ಮನಹಳ್ಳಿ ಗ್ರಾಮದ ಎನ್.ಎಚ್.ಇಂಜಿನಿಯರ್ ವರ್ಕ್ಸ್‌ಶಾಪ್‌ನ ರೋಲಿಂಗ್ ಶೆಟರ್‌ನ ಬೀಗ ಒಡೆದು 1 ವೆಲ್ಡಿಂಗ್ ಮೆಷಿನ್, 1 ಕಟಾಫ್ ಮೆಷಿನ್, 1 ಗ್ರೈಂಡಿಂಗ್ ಮೆಷಿನ್‌ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.

ಜು.25 ರಂದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ಟಿವಿಎಸ್ ಮೊಪೆಡ್ ವಾಹನ ಸೇರಿದಂತೆ ಕದ್ದ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us