ಹುಣಸೂರಿನಲ್ಲಿ ಪ್ರತ್ಯೇಕ ಅಪಘಾತ: ವಕೀಲ ಸೇರಿ ಮೂವರು ದುರ್ಮರಣ

ಹುಣಸೂರು: ತಾಲ್ಲೂಕಿನ ಮೂರು ಕಡೆ ಪ್ರತ್ಯೇಕ ಅಪಘಾತಗಳಲ್ಲಿ ವಕೀಲ ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.

ವಕೀಲ ವಿನೋದ್ ರಾಜ್ (43), ಸಂಪತ್ ಪವಾರ್ (34), ರೈತ ಮಹಿಳೆ ಜಯಮ್ಮ (54) ಮೃತಪಟ್ಟವರು.

ಆಯರಹಳ್ಳಿಯಲ್ಲಿ ಬೈಕ್‌ನಿಂದ ಆಯತಪ್ಪಿ ಬಿದ್ದು ವಿನೋದ್‌ ರಾಜ್‌ ಮೃತಪಟ್ಟಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಣ್ಣೇಗೌಡರ ಕಾಲೋನಿಯ ಬಳಿ ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸಂಪತ್ ಪವಾರ್ ಮೃತಪಟ್ಟಿದ್ದಾರೆ. ಇನ್ನು ಬೀಜಗನಹಳ್ಳಿ ಬಳಿ ಗೂಡ್ಸ್ ವಾಹನ ಡಿಕ್ಕಿಯಾಗಿ ರೈತ ಮಹಿಳೆ ಜಯಮ್ಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇವೆರಡು ಪ್ರಕರಣಗಳು ಹುಣಸೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿವೆ.

× Chat with us