ಮಕ್ಕಳ ದಿನಾಚರಣೆಯಂದೆ ಮೂವರು ಮಕ್ಕಳು ನೀರುಪಾಲು

ಕುಶಾಲನಗರ: ಮಕ್ಕಳ ದಿನಾಚರಣೆಯಂದೇ ಕೊಡಗು ಜಿಲ್ಲೆಯಲ್ಲಿ ದುರ್ಘಟನೆಯೊಂದು ನಡೆದಿದೆ. ಕುಶಾಲನಗರ ಸಮೀಪದ ತೊರೆನೂರು ಬಳಿಯ ಹಾರಂಗಿ ಎಡದಂಡೆ ನಾಲೆಯಲ್ಲಿ ಮೂವರು ಮಕ್ಕಳ ಶವ ಪತ್ತೆಯಾಗಿದೆ.

ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗುವಿನ ಮೃತದೇಹ ನಾಲೆಯ ನೀರಿನಲ್ಲಿ ತೇಲಿಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಮೇಲಕ್ಕೆ ಎತ್ತಿದ್ದಾರೆ. ಮಕ್ಕಳು ಎಲ್ಲಿಯವರು ಎಂಬುದು ಗೊತ್ತಿಲ್ಲ. ಮಕ್ಕಳ ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ.

ಹಾರಂಗಿ ಜಲಾಶಯಕ್ಕೆ ನೀರು ಹರಿಸುವುದನ್ನು ಸ್ಥಗಿತ ಮಾಡಿ, ಶೋಧ ನಡೆಸಲಾಗುತ್ತಿದೆ.

× Chat with us