3 ದಿನಗಳ ನಂತರ ಮತ್ತೆ ಕಳ್ಳತನ: ವೇಬ್ರಿಜ್ ಕೊಠಡಿ ಮೇಲ್ಚಾವಣಿ ಒಡೆದು ಕಳವು!

ಮೂಗೂರು: ವೇಬ್ರಿಜ್ ಕೊಠಡಿಯ ಮೇಲ್ಚಾವಣಿಯ ಶೀಟ್ ಒಡೆದು ಒಳ ನುಗ್ಗಿರುವ ಖದೀಮರು ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಭಾನುವಾರ ತಡರಾತ್ರಿ ಮೂಗೂರಿನಲ್ಲಿ ನಡೆದಿದೆ.

ಮೂಗೂರಿನ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ಹೊಂದಿಕೊಂಡಿರುವ ಟಿ.ಡಿ.ಆದರ್ಶ್ ಅಲಿಯಾಸ್ ವೆಂಕಟೇಶ್ ಎಂಬವರಿಗೆ ಸೇರಿದ ಶ್ರೀ ತ್ರಿಪುರಾಂಭ ವೇಬ್ರಿಜ್ ಕೊಠಡಿಯ ಒಳ ನುಗ್ಗಿದ ಕಳ್ಳರು ಅಲ್ಲಿದ ಕಂಪ್ಯೂಟರ್‌ನ ಕೆಲವು ಭಾಗಗಳು ಹಾಗೂ ಸೋಲಾರ್, ಯುಪಿಎಸ್, ವಿದ್ಯುತ್ ಸಂಪರ್ಕ ಬ್ಯಾಟರಿ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ.

ಈ ಸುದ್ದಿ ತಿಳಿದ ತಿ.ನರಸೀಪುರ ಪಟ್ಟಣದ ಪೊಲೀಸರು, ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು.

ಕಳೆದ 3 ದಿನಗಳ ಹಿಂದೆಯಷ್ಠೇ ಸಮೀಪದ ಸುಂದ್ರಮ್ಮ ಮಾದಯ್ಯ ಎಂಬವರ ಶೀಟ್ ಮನೆಯಲ್ಲಿನ ಬೀಗ ಮುರಿದು 9 ದೊಡ್ಡ ಆಡುಮರಿಗಳನ್ನು 2 ಬಾರಿ ಕದ್ದು ಹೊಯ್ದದ ಬೆನ್ನಲ್ಲೇ ಮತ್ತೊಂದು ಪ್ರಕರಣ ನಡೆದಿದೆ. ಆಗಾಗ ಮೂಗೂರು ವ್ಯಾಪ್ತಿಯಲ್ಲಿಯೇ ಇಂತಹ ಘಟನೆಗಳು ನಡೆಯುತ್ತಿರುವುದು ಸ್ಥಳೀಯರಲ್ಲಿ ಆತಂಕ ತಂದೊಡ್ಡಿದೆ.

× Chat with us