ಬಂಡಿಪಾಳ್ಯ ಎಪಿಎಂಸಿ ಆವರಣದಲ್ಲಿ ಸರಣಿ ಕಳ್ಳತನ

ಮೈಸೂರು: ಬಂಡಿಪಾಳ್ಯದ ಎಪಿಎಂಸಿ ಆವರಣದಲ್ಲಿರುವ 5 ಮಂದಿ ಖದೀಮರ ತಂಡ ಸರಣಿ ಕಳ್ಳತನ ಮಾಡಿರುವ ಘಟನೆ ಮಂಗಳವಾರ ತಡರಾತ್ರಿ (ರಾತ್ರಿ 12.45ರಿಂದ 2 ಗಂಟೆ ಸಮಯ) ನಡೆದಿದೆ.

ಎಪಿಎಂಸಿ ಆವರಣದಲ್ಲಿರುವ 3 ದಿನಸಿ ಅಂಗಡಿಗಳ ಶಟರ್ ಲಾಕ್ ಅನ್ನು ಕಬ್ಬಿಣದ ಆಯುಧವೊಂದರಿಂದ ಮುರಿದು ಒಳ ನುಗ್ಗಿರುವ ಖದೀಮರು ಸಿಕ್ಕಷ್ಟು ಹಣವನ್ನು ದೋಚಿದ್ದಾರೆ. ಇನ್ನೆರಡು ಜ್ಯೂಸ್ ಅಂಗಡಿಗಳ ಶಟರ್ ಮುರಿಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಕೆಲವು ಅಂಗಡಿಗಳ ಸಿಸಿ ಟಿವಿಯನ್ನು ಜಖಂಗೊಳಸಿದ್ದಾರೆ. ಮೂರು ಅಂಗಡಿಗಳಿಂದ ಒಟ್ಟು 11,500 ರೂ. ಕಳವಾಗಿದೆ. ಬೇರೆ ಯಾವುದೇ ವಸ್ತುಗಳನ್ನು ಕಳವು ಮಾಡಿಲ್ಲ. ಕಾರ್ಯಾಚರಣೆ ನಡೆಸಿ ಶೀಘ್ರದಲ್ಲಿಯೇ ಆರೋಪಿಗಳನ್ನು ಪತ್ತೆ ಮಾಡಲಾಗುವುದು ಎಂದು ಮೈಸೂರು ದಕ್ಷಿಣ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಬುಧವಾರ ಬೆಳಿಗ್ಗೆ ಸ್ಥಳಕ್ಕೆ ಸಿಪಿಐ ಶಶಿಕುಮಾರ್, ಶ್ವಾನದಳ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

× Chat with us