BREAKING NEWS

ಪ್ರಧಾನಿ ಮೋದಿ ಚಾಲನೆ ನೀಡಿದ್ದ ಮೈಸೂರು ರೈಲು ನಿಲ್ದಾಣದ ವಿಶ್ವದರ್ಜೆಯ ಅಭಿವೃದ್ಧಿ ಕಾಮಗಾರಿ ಆರಂಭ ಶೀಘ್ರ

ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದ ಸಾಂಸ್ಕೃತಿಕ ನಗರಿ ಮೈಸೂರು ಜನರ ಬಹುನಿರೀಕ್ಷೆಯ ಕೇಂದ್ರ ರೈಲ್ವೆ ನಿಲ್ದಾಣ ವಿಸ್ತರಣೆ ಯೋಜನೆಯ ಟೆಂಡರ್ ಪ್ರಕ್ರಿಯೆ ಶುರುವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಿ, ಕೆಲವೇ ತಿಂಗಳುಗಳಲ್ಲಿ ನಿಲ್ದಾಣ ಸುಂದರ ಆಧುನಿಕ ರೂಪ ಪಡೆದುಕೊಂಡು ವಿಶ್ವ ದರ್ಜೆಯ ಸೇವೆಯನ್ನು ಪ್ರಯಾಣಿಕರಿಗೆ ನೀಡಲಿದೆ.

ಸುಮಾರು ಎಂಟು ದಶಕಗಳ ಹಿಂದೆ ಅಂದರೆ 1940ರಲ್ಲಿ ಸ್ಥಾಪನೆಯಾಗಿರುವ ಈ ರೈಲು ನಿಲ್ದಾಣವು ಇಂದು ಜನಸಂಖ್ಯೆ ಆಧಾರದಲ್ಲಿ ಉತ್ತಮ ಸೇವೆ ಒದಗಿಸುವ ದೃಷ್ಟಿಯಿಂದ ವಿಸ್ತರಣೆ ಅಗತ್ಯವಾಗಿದೆ. ಇದು ಇಲ್ಲಿನ ಜನರ ಬಹುದಿನಗಳ ಬೇಡಿಕೆಯು ಆಗಿತ್ತು. ಈ ಕಾರಣದಿಂದಲೇ ಮೈಸೂರು ರೈಲ್ವೆ ನಿಲ್ದಾಣ ಅಭಿವೃದ್ಧಿ ಕಾಮಗಾರಿಗೆ ಕಳೆದ ವರ್ಷ 2022ರ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ 346.64 ಕೋಟಿ ರೂ. ವೆಚ್ಚದ ಯೋಜನೆಯಡಿ ಶಿಲಾನ್ಯಾಸ ನೆರವೇರಿಸಿದ್ದರು. ಅಲ್ಲಿಂದ ಈವರೆಗೂ ಅಭಿವೃದ್ಧಿ, ವಿಸ್ತರಣೆ ಹೇಗಿರಬೇಕು ಎಂದೆಲ್ಲ ನೀಲ ನಕ್ಷೆ ತಯಾರಿಸಲಾಗಿದೆ.

ಸದ್ಯ ಯೋಜನೆ ಅನುಷ್ಠಾನಕ್ಕಾಗಿ ಟೆಂಡರ್ ಕರೆಯಲಾಗಿದೆ, ಆದಷ್ಟು ಶೀಘ್ರವೇ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಮುಂದಿನ ಎರಡು ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು. ರೈಲು ನಿಲ್ದಾಣ ವಿಸ್ತರಣಾ ಯೋಜನೆಯು ಪೂರ್ಣಗೊಳಿಸಲು 36 ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ಅಧಿಕಾರಿಗಳಾದ ಶಿಲ್ಪಿ ಅಗರ್‌ವಾಲ್ ತಿಳಿಸಿದ್ದಾರೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.

ಯೋಜನೆಯಲ್ಲಿ ಈ ಅಭಿವೃದ್ಧಿ ಪ್ರಸ್ತಾಪ: ಮೈಸೂರಿನ ರಾಜರ ಕಾಲದಲ್ಲಿ ನಿರ್ಮಾಣವಾದ ಈ ಪಾರಂಪರಿಕ ರೈಲು ನಿಲ್ದಾಣ ಕಟ್ಟಡವು ಈಗಿನ ಜನಸಂಖ್ಯೆಗೆ ಅನುಗುಣವಾಗಿ ವಿಸ್ತರಣೆಗೆ ಯೋಜಿಸಲಾಗಿದೆ. ಮೈಸೂರು ಹಾಗೂ ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ರೈಲುಗಳ ಸ್ವಚ್ಛತೆ, ಕೆಲ ಕಾಲ ನಿಲುಗಡೆಗೆ ಸ್ಥಳಾವಕಾಶ, ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳು, ರೈಲು ದುರಸ್ತಿ ಕಾರ್ಯಕ್ಕೆ ಪಿಟ್‌ಲೈನ್, ಬೇಕಾಗುವಷ್ಟು ಫ್ಲಾಟ್‌ಫಾರಂ ನಿರ್ಮಾಣ ಸೇರಿದಂತೆ ಭವಿಷ್ಯ ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿ ಮಾಡಲಾಗುತ್ತಿದೆ.

ರಾಜ್ಯದ ಎರಡು ಪ್ರಮುಖ ನಗರಗಳಾದ ಮೈಸೂರು-ಬೆಂಗಳೂರು ಮಧ್ಯೆ ಜೋಡಿ ಹಳಿ ನಿರ್ಮಾಣವಾಗಿದೆ. ವಿದ್ಯುದೀಕರಣ ಸಹ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಹೆಚ್ಚು ರೈಲುಗಳು ಈ ಮಾರ್ಗದಲ್ಲಿ ಒಡಾಡಲಿವೆ. ಹೀಗಾಗಿ ಪ್ರಯಾಣಿಕರ ಸಂಖ್ಯೆಯು ಹೆಚ್ಚಾಗಲಿದೆ. ಸದ್ಯ ನಿಲ್ದಾಣಕ್ಕೆ ಬರುತ್ತಿರುವ ಕೆಲವು ರೈಲುಗಳಿಗೆ ನಿಲುಗಡೆಗೆ ಸ್ಥಳವಿಲ್ಲ. ಹೀಗಾಗಿ ಎಷ್ಟೋ ಸಮಯ ಮಾರ್ಗ ಮಧ್ಯೆಯೇ ಇಲ್ಲವೇ ನಿಲ್ದಾಣಕ್ಕೂ ದೂರದಲ್ಲಿ ನಿಲ್ಲಬೇಕಾದ ಸ್ಥಿತಿ ಇದೆ. ಇದೆಲ್ಲದರ ಸುಧಾರಣೆಗಾಗಿ ನಿಲ್ದಾಣ ವಿಸ್ತರಣೆ ಅಭಿವೃದ್ಧಿ ಯೋಜನೆ ಸರ್ಕಾರ ಕೈಗೆತ್ತಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕ್ವಾಟ್ರರ್ಸ್ ತೆರವಿಗೆ ಸಿದ್ಧತೆ: ಹಾಲಿ ರೈಲು ನಿಲ್ದಾಣದಲ್ಲಿ ಹೆಚ್ಚುವರಿಯಾಗಿ ಮೂರು ಪ್ಲಾಟ್ ಫಾರಂ ನಿರ್ಮಿಸಲಾಗುತ್ತಿದೆ. ಅದಕ್ಕೆ ಅಗತ್ಯವಾಗಿರುವ ಸ್ಥಳಗಳಲ್ಲಿ ಈಗಿರುವ ಕ್ವಾಟ್ರರ್ಸ್‌ಗಳನ್ನು ತೆರವುಗೊಳಿಸಿದ ನಂತರ ಅಲ್ಲಿ ಸ್ಥಾಪಿಸಲಾಗುವುದು. ಈ ಸಂಬಂಧ ತೆರವು ಕಾರ್ಯ ನಡೆಯಲಿದೆ. ಇದರಿಂದ ರೈಲ್ವೆ ಸಿಬ್ಬಂದಿಗೆ ಬೇರೆ ಸ್ಥಳಗಳಲ್ಲಿ ಕ್ವಾಟ್ರರ್ಸ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.

ಎಲ್ಲವು ಅಂದುಕೊಂಡಂತೆ ಅಭಿವೃದ್ಧಿಯಾದ ನಂತರ ಮೈಸೂರಿನ ಪ್ರಯಾಣಿಕರಿಗೆ ಮತ್ತು ರೈಲು ಗಾಡಿಗಳಿಗೆ ಹೆಚ್ಚುವರಿಯಾಗಿ ಮೂರು ಪ್ಲಾಟ್‌ಫಾರಂ (7,8,9), ಹೆಚ್ಚುವರಿ 4 ಪಿಟ್‌ಲೈನ್ ಮತ್ತು 4 ಸ್ಟಾಬ್ಲಿಂಗ್ ಲೈನ್ ಸಿಗುತ್ತವೆ. ಕೋಚ್‌ಗಳ ಸ್ವಯಂ ಚಾಲಿತ ವಾಷಿಂಗ್ ಪ್ಲಾಂಟ್ ಓವರ್ ಬ್ರಿಡ್ಜ್ ಅನ್ನು 9ರವರೆಗೆ ವಿಸ್ತರಣೆ ಆಗಲಿದೆ. ಈ ಮೂಲಕ ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಲಿದೆ ಎಂದು ಶಿಲ್ಪಿ ಅಗರ್‌ವಾಲ್ ತಿಳಿಸಿದರು.

andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago