ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದಾಗ ವಿದ್ಯುತ್‌ ಸ್ಪರ್ಶ; ವ್ಯಕ್ತಿ ಸಾವು

ಮೈಸೂರು: ವೆಲ್ಡಿಂಗ್‌ ಮಾಡುತ್ತಿದ್ದಾಗ ವಿದ್ಯುತ್‌ ಸ್ಪರ್ಶಿಸಿ ವ್ಯಕ್ತಿ ಮೃತಪಟ್ಟಿರುವ ಘಟನೆ ಬನ್ನೂರು ರಸ್ತೆಯ ಹೊಸಹುಂಡಿ ಬಳಿ ನಡೆದಿದೆ.

ಕೆ.ಸಿ.ನಗರ ನಿವಾಸಿ ಸೈಯದ್‌ ಮುಕ್ತಾರ್‌ (48) ಮೃತ ವ್ಯಕ್ತಿ.

ಆಟೋ ಗ್ಯಾರೇಜ್‌ವೊಂದರಲ್ಲಿ ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್‌ ಸ್ಪರ್ಶಿಸಿ ಸಾವಿಗೀಡಾಗಿದ್ದಾರೆ. ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us