ಚೆನ್ನೈ: ಬ್ರಿಟಿಷರ ಕಾಲದ ಅಪರಾಧ ಕಾನೂನುಗಳಿಗೆ ಪರ್ಯಾಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್‌ನಲ್ಲಿ ಶುಕ್ರವಾರ ಮಂಡಿಸಿದ ಮೂರು ಹೊಸ ವಿಧೇಯಕಗಳ ಹಿಂದಿ ಹೆಸರುಗಳನ್ನು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ವಿರೋಧಿಸಿದೆ.
ಸಂಸತ್‌ನ ಮುಂಗಾರು ಅಧಿವೇಶನ ಅಂತ್ಯಗೊಂಡ ಬಳಿಕ ದಿಲ್ಲಿಯಿಂದ ಮರಳಿದ ಡಿಎಂಕೆ ಸಂಸದ ವಿಲ್ಸನ್, ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು. “ಭಾರತವು ಅನೇಕ ವಿಭಿನ್ನ ಭಾಷೆಗಳನ್ನು ಹೊಂದಿರುವುದರಿಂದ ಇಂಗ್ಲಿಷ್ ಸಾಮಾನ್ಯ ಬಳಕೆಯ ಭಾಷೆಯಾಗಿದೆ. ಎಲ್ಲಾ ಮೂರು ವಿಧೇಯಕಗಳು ಹಿಂದಿಯಲ್ಲಿವೆ. ಹೀಗಾಗಿ ಅದು ಯಾವ ಮಸೂದೆ ಎನ್ನುವುದು ಜನರಿಗೆ ಅರ್ಥವಾಗುವುದಿಲ್ಲ. ಈ ಹೆಸರುಗಳನ್ನು ಉಚ್ಛರಿಸುವುದು ಬಹಳ ಕಷ್ಟವಾಗುತ್ತಿದೆ. ಇದು ಭಾರತದಾದ್ಯಂತ ಹಿಂದಿಯನ್ನು ಬಲವಂತವಾಗಿ ತುರುಕುವುದಕ್ಕೆ ಎಡೆಮಾಡಿಕೊಡಲಿದೆ” ಎಂದು ಆರೋಪಿಸಿದರು.
ಈ ನಡೆಯು ಸಂವಿಧಾನ ವಿರೋಧಿ ಎಂದು ವಿಲ್ಸನ್ ಟೀಕಿಸಿದರು. “ಮೂರೂ ಮಸೂದೆಗಳ ಶೀರ್ಷಿಕೆಗಳು ಹಿಂದಿಯಲ್ಲಿವೆ. ಕಾನೂನುಗಳ ಶೀರ್ಷಿಕೆ ಹಿಂದಿಯಲ್ಲಿ ಇರುವುದು ಸಂವಿಧಾನದ ನಿಯಮಕ್ಕೆ ವಿರುದ್ಧವಾಗಿದೆ. ಮಸೂದೆ ಸೇರಿದಂತೆ ಏನೇ ರೂಪಿಸಿದರೂ ಅದು ಇಂಗ್ಲಿಷ್‌ನಲ್ಲಿ ಇರಬೇಕು ಎಂದು ಸಂವಿಧಾನದಲ್ಲಿ ಹೇಳಲಾಗಿದೆ” ಎಂಬುದಾಗಿ ಹೇಳಿದರು.
ಕೇಂದ್ರ ಸರ್ಕಾರವು ಮಸೂದೆಗಳನ್ನು ಹಿಂದಿಯಲ್ಲಿ ಪ್ರಸ್ತುತಪಡಿಸಿರುವುದು ‘ಭಾಷಾ ಸಾಮ್ರಾಜ್ಯಶಾಹಿ’ ಸರಣಿಯ ಭಾಗವಾಗಿದೆ ಮತ್ತು ಇದು ವಸಾಹತು ವಿಮೋಚನೆಯ ಹೆಸರಿನಲ್ಲಿ ವಸಾಹತು ಮರು ಸ್ಥಾಪನೆಯ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದರು.
“ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ಮೊಂಡುತನದ ಪ್ರಯತ್ನವು ಒಟ್ಟಾರೆ ಬದಲಾವಣೆಯ ಮೂಲಕ ಭಾರತೀಯ ವೈವಿಧ್ಯತೆಯ ಸತ್ವವನ್ನು ಹಾಳುಮಾಡುವಂತಿದೆ- ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ವಿಧೇಯಕಗಳು ಭಾಷಾ ಸಾಮ್ರಾಜ್ಯಶಾಹಿಯ ಭಾಗವಾಗಿದೆ. ಇದು ಭಾರತದ ಏಕತೆಯ ಮೂಲ ನೆಲಗಟ್ಟಿಗೆ ವಿರುದ್ಧವಾಗಿದೆ. ಇನ್ನು ಮುಂದೆ ಒಂದೇ ಒಂದು ತಮಿಳು ಪದವನ್ನು ಉಚ್ಚರಿಸುವ ನೈತಿಕ ಹಕ್ಕೂ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಲ್ಲ” ಎಂದು ಸ್ಟಾಲಿನ್ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು.
ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಪಲ್ಟಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ.…
ಕಲಬುರ್ಗಿ: ಸಂವಿಧಾನದ ವಿಧಿ 371 ( ಜೆ ) ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಹಾಗೂ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಪ್ರಕರಣ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು…
ಬೆಂಗಳೂರು: ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಬಂಧನಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ ಎನ್ನುವುದು ನನ್ನ ಅನುಮಾನ ಎಂದು…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ…
ಮಂಡ್ಯ: ಸಕ್ಕರೆ ನಾಡು ಮಂಡ್ಯ ನಗರಿಯಲ್ಲಿ ಮೂರು ದಿನಗಳ ಕಾಲ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು,…