ಶ್ರೀರಂಗಪಟ್ಟಣ: ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರುಗಳ ನಿಗೂಢ ಸಾವು!

ಶ್ರೀರಂಗಪಟ್ಟಣ: ತಾಲ್ಲೂಕಿನ ಚಂದಗಾಲು ಗ್ರಾಮದ ನಾರಾಯಣ ಎಂಬವರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ 3 ಹಸುಗಳು, 2 ಟಗರು ಹಠಾತ್ ಸಾವು ಕಂಡಿರುವ ಘಟನೆ ನಡೆದಿದೆ.

ಭಾನುವಾರ ತಡರಾತ್ರಿ ದನಕರುಗಳಿಗೆ ಮೇವು ಹಾಕಿದ್ದ ನಾರಾಯಣ ಅವರು ಬೆಳಿಗ್ಗೆ ಹಾಲು ಕರೆಯಲು ಬಂದ ವೇಳೆ ಕೊಟ್ಟಿಗೆಯಲ್ಲಿ ಹಸುಗಳು ಹಾಗೂ ಟಗರುಗಳು ಮೃತಪಟ್ಟಿವೆ. ಈ ಹಠಾತ್ ಸಾವಿಗೆ ಕಾರಣ ತಿಳಿಯದೆ ಅವರು ಕಂಗಾಲಾಗಿದ್ದಾರೆ.

× Chat with us