ಕನ್ನಡಿಗನ ಮನೆಗೆ ಚಿನ್ನದ ಹುಡುಗ ಭೇಟಿ!

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜ್ವಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ್ದ ನೀರಜ್ ಚೋಪ್ರಾ ಕನ್ನಡಿಗ ಕಾಶೀನಾಥ್ ಮನೆಗೆ ಭೇಟಿ ನೀಡಿ ಅವರ ಸಂಸಾರದೊಂದಿಗೆ ಕೆಲ ಕಾಲ ಕಳೆದಿದ್ದಾರೆ.

ಕಾಶೀನಾಥ್ ಮೂಲತಃ ಉತ್ತರ ಕರ್ನಾಟಕದ ಶಿರಸಿಯವರು. ಸದ್ಯ ಪುಣೆಯ ಕೋರೆಗಾಂವ್ ನಲ್ಲಿರುವ ಕಾಶೀನಾಥ್ ಮನೆಗೆ ಭೇಟಿ ಕೊಟ್ಟ ನೀರಜ್ ಕುಟುಂಬ ಸದಸ್ಯರೊಂದಿಗೆ ಕೆಲ ಕಾಲ ಕಳೆದಿದ್ದಾರೆ.

ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಯಶಸ್ಸು ಸಿಕ್ಕ ಮೇಲೂ ತಮ್ಮ ಬೆಳವಣಿಗೆಗೆ ಸಹಕಾರ ನೀಡಿದ ಗುರುವನ್ನು ನೀರಜ್ ಮರೆತಿಲ್ಲ. ಇದಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ.

× Chat with us