ಮೈಸೂರಿನಲ್ಲಿ ಮೊದಲ ವರ್ಷಧಾರೆ ಸಂಭ್ರಮ!

ಮೈಸೂರು: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮೊದಲ ವರ್ಷಧಾರೆಯಾಗಿ ಮಳೆ ಸಿಂಚನವಾಗಿದ್ದು, ಎಲ್ಲೆ ಸಂತಸ ಕಂಡು ಬಂದಿದೆ.
ಯುಗಾದಿಯ ನವ ಸಂವತ್ಸರದ ಬಳಿಕ ಸುರಿಯುತ್ತಿರುವ ಮೊದಲ ಮಳೆಯಾಗಿರುವುದರಿಂದ ಬಿಸಿಲಿ ಬೇಗೆಗೆ ಬಳಲಿದ್ದ ನಾಗರೀಕರು ಮಳೆ ಕಂಡು ಖುಷಿ ಪಟ್ಟಿದ್ದಾರೆ.

ಸಂಜೆ ೬ರವೇಳೆಗೆ ಪ್ರಾರಂಭಗೊಂಡ ಮಳೆ ಕಡಕೊಳ, ನಂಜನಗೂಡು, ಹುಲ್ಲಹಳ್ಳಿ, ಬನ್ನೂರು ಹಾಗೂ ತಾಲ್ಲೂಕಿನಾದ್ಯಂತ ಭಾರೀ ಪ್ರಮಾಣದಲ್ಲಿ ಸುರಿದಿದೆ. ರಾತ್ರಿ ವೇಳೆಗೆ ನಗರದಲ್ಲಿಯೂ ಸುರಿಯಲಾರಂಭಿಸಿ ನಗರ ಜನರಿಗೂ ತಂಪೆರೆದಿದೆ.

× Chat with us