ಎಸಿಬಿಯಿಂದ ದಾಳಿಗೊಳಗಾಗಿದ್ದ 15 ಸರ್ಕಾರಿ ಅಧಿಕಾರಿಗಳ ವಿರುದ್ಧ ಎಪ್ಐಆರ್ ದಾಖಲು

ಬೆಂಗಳೂರು: ಇತ್ತೀಚೆಗೆ ಎಸಿಬಿಯಿಂದ ದಾಳಿಗೊಳಗಾಗಿದ್ದ 15 ಸರ್ಕಾರಿ ಅಧಿಕಾರಿಗಳ ವಿರುದ್ಧ ಎಪ್ಐ ಆರ್ ದಾಖಲಾಗಿದ್ದು, ಬಂಧನದ ಭೀತಿ ಎದುರಾಗಿದೆ.

ಬೆಂಗಳೂರಿನ ಯಲಹಂಕ ಸರ್ಕಾರಿ ಆಸ್ಪತ್ರೆಯ ಫಿಜಿಯೋ ಥೆರಪಿಸ್ಟ್ ಎಸ್.ಎನ್.ನಾಗರಾಜ್, ಬೆಂಗಳೂರು ಬಿಬಿಎಂಪಿ ಡಿ ಗ್ರೂಪ್ ನೌಕರ ಜೆ.ವೈಘಿ.ಗಿರಿ, ಸಕಾಲದ ಆಡಳಿತಾಧಿಕಾರಿ ಎಲ್.ಸಿ.ನಾಗರಾಜ್, ಬಿಬಿಎಂಪಿ ಕೇಂದ್ರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮಾಯಣ್ಣಘಿ ವಿರುದ್ಧ ಎಪ್ಐಆರ್ ದಾಖಲಾಗಿದೆ.

ಇದೇ ರೀತಿ ಎಸ್‍ಎಂ ಬಿರಾದರ್ (ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಜೇವರ್ಗಿ), ಟಿಎಸ್ ರುದ್ರೇಶಪ್ಪ (ಕೃಷಿ ಇಲಾಖೆ ಜಂಟಿ ನಿರ್ದೇಶಕರು), ಶ್ರೀನಿವಾಸ್.ಕೆ (ಕಾರ್ಯಪಾಲಕ ಇಂಜಿನಿಯರ್ ಎಚ್‍ಎಲ್‍ಸಿ ಕೆಆರ್ ಪೇಟೆ ಉಪ ವಿಭಾಗ), ಕೆಎಸ್ ಅಂಗೇಗೌಡ (ಕಾರ್ಯಪಾಲಕ ಇಂಜಿನಿಯರ್, ಸ್ಮಾರ್ಟ್ ಸಿಟಿ, ಮಂಗಳೂರು ಪಾಲಿಕೆ), ಕೆಎಸ್ ಶಿವಾನಂದ್ (ಸಬ್ ರಿಜಿಸ್ಟಾರ್(ನಿವೃತ್ತ)-ಬಳ್ಳಾರಿ ), ಸದಾಶಿವ ರಾಯಪ್ಪ ಮರಅಂಗಣ್ಣನವರ್ (ಹಿರಿಯ ಮೋಟಾರು ನಿರೀಕ್ಷಕ-ಗೋಕಾಕ) ಅಡವಿ ಸಿದ್ದೇಶ್ವರ ಕಾರೆಪ್ಪ ಮಸ್ತಿ (ಅಭಿವೃದ್ಧಿ ಅಧಿಕಾರಿ ಸಹಕಾರ ಇಲಾಖೆ, ರಾಯಬಾಗ ತಾಲೂಕು ಬೆಳಗಾವಿ) ನಾಥಾಜಿ ಪೀರಾಜ ಪಾಟೀಲ್ (ಲೈನ್ ಮೆಕಾನಿಕ್ ಗ್ರೇಡ್-2 ಹಸ್ಲಾಂ-ಬೆಳಗಾವಿ), ಲಕ್ಷ್ಮೀನರಸಿಂಹಯ್ಯ (ರಾಜಸ್ವ ನಿರೀಕ್ಷಕರು ಕಸಬಾ-2 – ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ) ವಾಸುದೇವ್ ಆರ್‌ಎನ್‌ (ಮಾಜಿ ಯೋಜನಾ ನಿರ್ದೇಶಕರು ನಿರ್ಮಿತಿ ಕೇಂದ್ರ – ಬೆಂಗಳೂರು ಗ್ರಾಮಾಂತರ) ಬಿ ಕೃಷ್ಣಾರೆಡ್ಡಿ (ಪ್ರಧಾನ ವ್ಯವಸ್ಥಾಪಕ ನಂದಿನಿ ಹಾಲು ಉತ್ಪನ್ನ) ಇವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಂ 13(1), 13(2)ರಡಿ ಎಪ್ ಐಆರ್ ದಾಖಲಾಗಿಸಲಾಗಿದೆ.

× Chat with us