ಶಾಸಕ ಜಿಟಿಡಿ ಆಪ್ತ ಎನ್.ಬಿ.ಮಂಜು ಸೋಲು

ಮೈಸೂರು: ತಾಲ್ಲೂಕಿನ ಆನಂದೂರು ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶಾಸಕ ಜಿ.ಟಿ.ದೇವೇಗೌಡ ಆಪ್ತ ಎನ್‌.ಬಿ.ಮಂಜು ಸೋತಿದ್ದಾರೆ.

ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ತುಳಸೀರಾಮ್ ಎದುರು ಹೀನಾಯ ಸೋಲು ಕಂಡಿದ್ದಾರೆ. ತುಳಸೀರಾಮ್ 380 ಮತ ಪಡೆದಿದ್ದರೆ, ಎನ್.ಬಿ.ಮಂಜು 312 ಮತವನ್ನಷ್ಟೇ ಪಡೆದಿದ್ದರು.

ಮಂಜು ಅವರು ಗ್ರಾಪಂ ಚುನಾವಣೆಯಲ್ಲಿ ಮೂರು, ತಾಲ್ಲೂಕು ಪಂಚಾಯಿತಿಯಲ್ಲಿ ಒಮ್ಮೆ ಗೆಲುವು ಸಾಧಿಸಿದ್ದರು.

× Chat with us