ಸಂಕಷ್ಟದಲ್ಲಿರುವ ಮೈಸೂರಿನ ಗೈಡ್‌ಗಳಿಗೆ ನೆರವಾಗಿ: ಸಿಎಂಗೆ ತನ್ವೀರ್‌ ಸೇಠ್‌ ಪತ್ರ

ಮೈಸೂರು: ರಾಜ್ಯಸರ್ಕಾರವು ಕೋವಿಡ್‌ ಮೂಋಣೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೇರಿರುವ ಲಾಕ್‌ಡೌನ್‌ನಿಂದ ಮೈಸೂರಿನ ಗೈಡ್‌ಗಳು ಸಂಕಷ್ಟದಲ್ಲಿದ್ದು ರಾಜ್ಯಸರ್ಕಾರ ಅವರ ನೆರವಿಗೆ ಧಾವಿಸಬೇಕು ಎಂದು ಶಾಸಕ ತನ್ವೀರ್‌ ಸೇಠ್‌ ಅವರು ಸಿಎಂಗೆ ಪತ್ರ ಬರೆದಿದ್ದಾರೆ.

ರಾಜ್ಯ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾವಣೆಯಾಗಿರುವ ಗೈಡ್‌ಗಳು ಸಂಕಷ್ಟಕ್ಕೆ ಸಿಲುಕಿದ್ದು ರಾಜ್ಯ ಸರ್ಕಾರವು ಘೊಷಣೆ ಮಾಡಿರುವ ಪ್ಯಾಕೇಜ್‌ನಲ್ಲಿ ಅವರಿಗೂ ಪರಿಹಾರ ಧನ ನೀಡಬೇಕು ಎಂದು ಸೇಠ್‌ ಅವರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯ್ಲಲಿ ಮೈಸೂರಿನ ಗೈಡ್‌ಗಳು ಸಂಕಷ್ಟದಲ್ಲಿದ್ದಾರೆ. ಮೈಸೂರಿನಲ್ಲಿ ಇಲಾಖೆಯಲ್ಲಿ ನೋಂದಾವಣೆಯಾಗಿರುವ ಸಾವಿರಕ್ಕೂ ಹೆಚ್ಚು ಗೈಡ್‌ಗಳಿದ್ದಾರೆ ಎಂದು ಸೇಠ್‌ ತಿಳಿಸಿದ್ದಾರೆ.

× Chat with us