ʼರಾಜಕಾರಣದಲ್ಲಿ ಕೊನೆ ಕ್ಷಣದಲ್ಲಿ ಏನಾದ್ರೂ ಆಗಬಹುದುʼ

ಮೈಸೂರು: ರಾಜಕಾರಣದಲ್ಲಿ ಕೊನೇ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಮೈಸೂರು ಮೇಯರ್‌ ಚುನಾವಣೆ ಒಂದು ಉತ್ತಮ ಉದಾಹರಣೆ ಎಂದು ಶಾಸಕ ತನ್ವೀರ್‌ ಸೇಠ್‌ ತಿಳಿಸಿದ್ದಾರೆ.

ಮೇಯರ್‌ ಚುನಾವಣೆ ನಂತರ ಮಾಧ್ಯಮದವರ ಪ್ರಶ್ನೆಗ ಉತ್ತಿಸಿದ ಅವರು ಬಿಜೆಪಿಯನ್ನು ಅಧಿಕಾರದಿಂದ‌ ದೂರ ಇಡಲು ಕೊನೆ ಹಂತದ ಕಾರ್ಯಚರಣೆ ನಡೆಸಿ ಯಶಸ್ವಿಯಾಗಿದ್ದೇವೆ. ಒಪ್ಪಂದದ ಪ್ರಕಾರ ನಮಗೆ ಮೇಯರ್ ಸ್ಥಾನ ಸಿಗಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಬಿಜೆಪಿಗೆ ಸಿಗುವ ಲಕ್ಷಣ ಇದ್ದ ಕಾರಣ ನಾವು ಕಾರ್ಯತಂತ್ರ ಬದಲಿಸಿ ಮೇಯರ್ ಸ್ಥಾನ ಬಿಟ್ಟುಕೊಟ್ಟೆವು ಎಂದು ತಿಳಿಸಿದರು.

ಜೆಡಿಎಸ್ ನಮಗೆ ಬೆಂಬಲ ಕೇಳಿತ್ತು, ಕೇಳಿಲ್ಲ ಎಂಬುದು ಬೇರೆ ಪ್ರಶ್ನೆ. ನಮಗೆ ನಮ್ಮ‌ ಉದ್ದೇಶ ಈಡೇರಬೇಕಿತ್ತು ಅಷ್ಟೇ ಎಂದರು.

ಹುಲಿಗಳನ್ನು ಬೋನಿಗೆ ಹಾಕಿದ್ದೇವೆ ಎನ್ನುವ ಪ್ರತಾಪ್‌ ಸಿಂಹ ಹೇಳಿಕೆ ವಿಚಾರವಾಗಿ ಮಾತನಾಡಿದ ಸೇಠ್‌ ಅವರು, ಹುಲಿಗಳನ್ನು ಬೋನಿಗೆ ಹಾಕುವುದು ಹಳೆ ಸಂಸ್ಕೃತಿ. ಆದರೆ, ಮಂಗಗಳು ಎಲ್ಲಿ ಇರ್ತಾವೆ ಎಂಬುದು ಪ್ರತಾಪ್‌ಸಿಂಹಗೆ ಕೇಳಿ ಎಂದು ತನ್ವೀರ್‌ ಸೇಠ್‌ ವ್ಯಂಗ್ಯವಾಗಿ ನುಡಿದರು.

× Chat with us