ದಲಿತರು ಕುಡಿದ ಟೀ ಗ್ಲಾಸ್‌ ತೊಳೆದು ಮಾದರಿಯಾದ ತಹಸಿಲ್ದಾರ್!

ಗದಗ: ದಲಿತರು ಕುಡಿದ ಟೀ ಗ್ಲಾಸ್ ತೊಳೆಯುವ ಮೂಲಕ ಮುಂಡರಗಿ ತಹಸಿಲ್ದಾರ್‌ ಆಶಪ್ಪ ಪೂಜಾರ ಅವರು ಅಸ್ಪೃಶ್ಯತೆ ನಿವಾರಣೆ ಬಗ್ಗೆ ಜಾಗೃತಿ ಮೂಡಿಸಿದರು.

ಮುಂಡರಗಿ ತಾಲ್ಲೂಕಿನ ಹಾರೋಗೇರಿ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನು ಜೀವಂತವಾಗಿದೆ. ದಲಿತರು ಹಾಗೂ ಗ್ರಾಮದ ಹಿರಿಯರೊಂದಿಗೆ ಚಹಾದ ಅಂಗಡಿಗೆ ಹೋದ ತಹಸಿಲ್ದಾರ್‌, ದಲಿತರು ಕುಡಿದ ಚಹಾದ ಗ್ಲಾಸ್‌ ತೊಳೆದು ಎಲ್ಲರ ಗಮನ ಸೆಳೆದರು.

ಗ್ರಾಮದಲ್ಲಿ ದಲಿತರಿಗೆ ಚಹಾ ಅಂಗಡಿ ಹಾಗೂ ಕ್ಷೌರದ ಅಂಗಡಿ ಪ್ರವೇಶಕ್ಕೆ ನಿಷೇಧಿಸಲಾಗಿದೆ. ದಲಿತರ ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದರೆ ಚಹಾ ಅಂಗಡಿ ಬಂದ್ ಮಾಡಲಾಗುತ್ತಿತ್ತು. ಹೀಗಾಗಿ ಗ್ರಾಮದಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ತಹಶೀಲ್ದಾರ್‌ ಅವರು ಜಾಗೃತಿ ಸಭೆ ನಡೆಸಿದ್ದರು.‌

× Chat with us