ಪ್ರತಿಕಾಯಗಳ ಸುತ್ತ ಸಿಎಸ್‌ಐಆರ್-ಸಿಎಫ್‌ಟಿಆರ್‌ಐ ಸಮೀಕ್ಷೆ

ಪ್ರತಿಕಾಯಗಳು ಎಷ್ಟು ಪ್ರಮಾಣದಲ್ಲಿ ವೃದ್ಧಿಯಾಗಿವೆ ಎಂಬುದನ್ನು ತಿಳಿಯಲು ಸಿಎಸ್‌ಐಆರ್-ಸಿಎಫ್‌ಟಿಆರ್‌ಐ ಕೋವಿಡ್ ಪರೀಕ್ಷಾ ಕೇಂದ್ರ ‘ಸೀರೋ ಸಮೀಕ್ಷೆ’ಗಳನ್ನು ನಡೆಸಿದೆ.

 • ಯತಿರಾಜ್ ಬ್ಯಾಲಹಳ್ಳಿ

ಕೋವಿಡ್ ಬಿಕ್ಕಟ್ಟು ಆರಂಭವಾದ ಮೇಲೆ ಜನರು ಹೆಚ್ಚು ಮಾತನಾಡಿದ್ದು ಬಹುಶಃರೋಗ ನಿರೋಧಕ ಶಕ್ತಿಕುರಿತು. ಇಮ್ಯೂನಿಟಿ ಇದ್ದರೆ ಕೋವಿಡ್ ಗೆದ್ದು ಬಂದಂತೆ. ಸೋಂಕು ತಗುಲಿದ ಮೇಲೆ ನಮ್ಮಲ್ಲಿ ಶಕ್ತಿಯುತ ಪ್ರತಿಕಾಯಗಳು ವೃದ್ಧಿಯಾಗುತ್ತವೆ. ಯಾವ ಪ್ರಮಾಣದಲ್ಲಿ ಇಮ್ಯುನಿಟಿ ಬೆಳೆದಿದೆ ಎಂದು ಸಂಶೋಧನೆಗಳು ಕಾಲಕಾಲಕ್ಕೆ ನಡೆಯುತ್ತಿವೆ.

ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ (ಸಿಎಸ್‌ಐಆರ್-ಸಿಎಫ್‌ಟಿಆರ್‌ಐ) ಕೋವಿಡ್ ಕೇಂದ್ರವು ಕಳೆದೊಂದು ವರ್ಷದಿಂದ ನಿರಂತರ ಸಮೀಕ್ಷೆಗಳನ್ನು ನಡೆಸುತ್ತಿದೆ. ಸಿಎಫ್‌ಟಿಆರ್‌ಐ ನಿರ್ದೇಶಕರಾದ ಶ್ರೀದೇವಿ ಅನ್ನಪೂರ್ಣ ಸಿಂಗ್ ಹಾಗೂ ಸಂಯೋಜಕ, ಪ್ರಮುಖ ವಿಜ್ಞಾನಿ ಡಾ.ಪ್ರಕಾಶ್ ಎಂ.ಅಲಾಮಿ ಅವರ ನೇತೃತ್ವದಲ್ಲಿ ಸಂಶೋಧನಾರ್ಥಿಗಳು ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದು, ಮೂರು ಹಂತಗಳಲ್ಲಿಸೀರೋ ಸರ್ವೇನಡೆಸಿದ್ದಾರೆ.

 • ಏನಿದುಸೀರೋ ಸಮೀಕ್ಷೆ?’

ನಮ್ಮ ರಕ್ತದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಪ್ರತಿಕಾಯಗಳು ಇರುತ್ತವೆ. ಅವು ಯಾವ ರೀತಿಯ ಪ್ರತಿಕಾಯಗಳು? ಹೇಗೆ ಕೆಲಸ ಮಾಡುತ್ತಿವೆ? ಅವು ರಕ್ಷಣಾತ್ಮಕ ಪ್ರತಿಕಾಯಗಳೋ ಇಲ್ಲವೋ?- ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಮಾಡುವ ಸಮೀಕ್ಷೆ ಇದಾಗಿದೆ.

 • ಯಾರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ?

ಈಗಾಗಲೇ ಮೂರು ಸಮೀಕ್ಷೆಗಳನ್ನು ಸಿಎಫ್‌ಟಿಆರ್‌ಐ ತಂಡ ಮಾಡಿದ್ದು, ಸಿಎಫ್‌ಟಿಆರ್‌ಐ ವಿದ್ಯಾರ್ಥಿಗಳು, ನೌಕರರು, ನಿವೃತ್ತ ಸಿಬ್ಬಂದಿ, ಕುಟುಂಬದವರು, ಯೋಜನಾ ಸಹಾಯಕರುಹೀಗೆ ಇಡೀ ಸಿಎಫ್‌ಟಿಆರ್ ಕುಟುಂಬದ ಸುಮಾರು ,೦೦೦ ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

 • ಮೊದಲೆರಡು ಸಮೀಕ್ಷೆ ಹೇಳಿದ್ದೇನು?

೨೦೨೦ರ ಆಗಸ್ಟ್ಸೆಪ್ಟೆಂಬರ್ ಅವಧಿಯಲ್ಲಿ ಮೊದಲ ಸರ್ವೇ ಮಾಡಲಾಗಿತ್ತು. ಎಷ್ಟು ಮಂದಿಗೆ ಸೋಂಕು ಬಂದಿದೆ? ಸ್ವಾಭಾವಿಕವಾಗಿ ಎಷ್ಟು ಮಂದಿಗೆ ಸೋಂಕು ತಗುಲಿದೆ? ಪ್ರತಿಕಾಯಗಳು ಎಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗಿವೆ ಎಂಬುದನ್ನು ಪರಿಶೀಲಿಸಲಾಯಿತು. ಸಮೀಕ್ಷೆಯ ಪ್ರಕಾರ ದೇಶದಾದ್ಯಂತ ಶೇ. ೧೦ರಷ್ಟು ಮಂದಿಗೆ ಮಾತ್ರ ಪ್ರತಿಕಾಯ ಉಂಟಾಗಿದ್ದವು. ಸೋಂಕಿತರಲ್ಲಿ ಶೇ. ೭೫ರಷ್ಟು ಮಂದಿ ಗುಣಲಕ್ಷಣ ರಹಿತವಾಗಿದ್ದರು. ಶೇ.೨೫ರಷ್ಟು ಮಾತ್ರ ಗುಣಲಕ್ಷಣಗಳನ್ನು ಹೊಂದಿದ್ದರು. ಗಂಡಸರಲ್ಲಿ ಹೆಚ್ಚು ಸೋಂಕು ಕಂಡು ಬಂದಿತ್ತು. ಮಾಂಸಾಹಾರಿಗಳಲ್ಲಿ ಸೋಂಕು ಹೆಚ್ಚಿತ್ತು. ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಸೋಂಕು ಉಲ್ಬಣಿಸಿತ್ತು.

ಫೆಬ್ರವರಿಯಲ್ಲಿ ಮತ್ತೊಂದು ಸರ್ವೇಯನ್ನು ಕೈಗೊಳ್ಳಲಾಯಿತು. ಸಮೀಕ್ಷೆಯ ವೇಳೆಗೆ ಶೇ. ೨೨ರಷ್ಟು ಮಂದಿಗೆ ಪ್ರತಿಕಾಯ ಉಂಟಾಗಿತ್ತು. ಪ್ರತಿಕಾಯಗಳು ಉಂಟಾಗಬೇಕಾದರೆ ಸ್ವಾಭಾವಿಕವಾಗಿ ಸೋಂಕು ತಗುಲಬೇಕು ಅಥವಾ ವ್ಯಾಕ್ಸಿನ್ ನೀಡಿ, ಪ್ರತಿಕಾಯಗಳು ವೃದ್ಧಿಯಾಗಲು ಪ್ರಚೋದಿಸಬೇಕು ಎಂಬುದು ತಿಳಿದುಬಂತು.

 • ಮೂರನೇ ಸಮೀಕ್ಷೆ: ಯಾವುದಕ್ಕೆ ಒತ್ತು ನೀಡಿದೆ?

ಜುಲೈ ೭ರಿಂದ ಜುಲೈ ೯ರವರೆಗೆ ಮೂರನೇ ಸುತ್ತಿನ ಸಮೀಕ್ಷೆಯನ್ನು ನಡೆಸಲಾಗಿದೆ. ಸುಮಾರು ,೦೦೦ ಮಂದಿಯ ಮಾದರಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ರಕ್ತದ ಮಾದರಿಗಳ ವಿಶ್ಲೇಷಣೆಯಲ್ಲಿ ಸಿಎಫ್‌ಟಿಆರ್ತಂಡ ತೊಡಗಿದೆ.

ಕುರಿತು ವಿವರಣೆ ನೀಡಿದ ವೈರಾಣು ತಜ್ಞ ಹಾಗೂ ಸಿಎಸ್ಐಆರ್ಸಿಎಫ್‌ಟಿಆರ್ ಕೋವಿಡ್ ಸೆಂಟರ್ ಪ್ರಯೋಗಾಲಯದ ಉಸ್ತುವಾರಿ ಡಾ.ಪಿ.ವಿ.ರವೀಂದ್ರ, ‘ಒಮ್ಮೆ ಸೋಂಕು ತಗುಲಿ, ರೋಗ ನಿರೋಧಕ ಶಕ್ತಿ ಬಂದರೆ ಅದು ಮೂರು ತಿಂಗಳು ಮಾತ್ರ ಇರುತ್ತದೆ. ಕೋವಿಡ್ ಪಾಸಿಟಿವ್ ಬಂದವರಿಗೆ ಮೂರು ತಿಂಗಳು ಲಸಿಕೆ ಹಾಕಿಸುವ ಅಗತ್ಯ ಇರುವುದಿಲ್ಲ. ಪ್ರತಿಕಾಯ ಕಡಿಮೆ ಆದಾಗ ಲಸಿಕೆಯನ್ನು ನೀಡಬಹುದು. ನಮ್ಮ ಮೂರನೇ ಸಮೀಕ್ಷೆಯಲ್ಲಿ ಲಸಿಕೆಗಳ ಪರಿಣಾಮಗಳನ್ನು ವಿಶ್ಲೇಷಿಸಲಾಗುತ್ತಿದೆಎನ್ನುತ್ತಾರೆ.

ಲಸಿಕೆಗಳು ಸೋಂಕು ತಡೆಯುವಲ್ಲಿ ಲವಾಗಿವೆಯೇ? ಪ್ರತಿಕಾಯ ಉಂಟಾಗಿದೆಯೇ? ಎಂದು ಪರಿಶೀಲಿಸಲಾಗುವುದು. ಎರಡನೇ ಸಮೀಕ್ಷೆಯಲ್ಲಿ ಶೇ.೨೨ರಷ್ಟು ಮಂದಿಯಲ್ಲಿ ಪ್ರತಿಕಾಯ ಬಲಿಷ್ಠವಾದದ್ದನ್ನು ನೋಡಿದೆವು. ಪ್ರಮಾಣ ಶೇ. ೬೦ಕ್ಕೆ ಏರಿಕೆಯಾದರೆ ನಮ್ಮ ಲಸಿಕಾ ಕಾರ್ಯ ಯಶಸ್ವಿಯಾಗಿದೆ ಎಂದರ್ಥ. ಯಾವ ವಯೋಮಾನದವರಲ್ಲಿ ಯಾವ ಪ್ರಮಾಣದ ಪ್ರತಿಕಾಯ ಉಂಟಾಗಿದೆ, ಈಗಾಗಲೇ ಮಧುಮೇಹ, ಬಿಪಿ ಇರುವವರಲ್ಲಿ ಲಸಿಕೆಯ ಪರಿಣಾಮಗಳೇನು? ಎಂದು ವಿಶ್ಲೇಷಿಸಲಾಗುವುದುಎನ್ನುತ್ತಾರೆ ಡಾ.ರವೀಂದ್ರ.

ಮೊದಲೆರಡು ಸಮೀಕ್ಷೆಯಲ್ಲಿ ಮಕ್ಕಳನ್ನು ಒಳಗೊಂಡಿರಲಿಲ್ಲ. ಸಮೀಕ್ಷೆಯಲ್ಲಿ ೧೮ ವರ್ಷದೊಳಗಿನ ಮಕ್ಕಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮಕ್ಕಳಲ್ಲಿ ಪಾಸಿಟಿವ್ ಬಂದು, ಪ್ರತಿಕಾಯ ವೃದ್ಧಿಯಾಗಿದೆಯೇ ಎಂದು ಪರಿಶೀಲಿಸಲಾಗುವುದು. ಕೊರೊನಾ ರೂಪಾಂತರ ತಳಿಗಳಿಗೆ ಲಸಿಕೆಗಳು ಯಾವ ರೀತಿ ಪ್ರತಿಕ್ರಿಯಿಸಲಾಗಿದೆ ಎಂದು ನೋಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ನಾವೊಂದು ವರದಿಯನ್ನು ನೀಡುತ್ತೇವೆ ಎಂದು ಮಾಹಿತಿ ನೀಡಿದರು.

***

ಮೂರನೇ ಸಮೀಕ್ಷೆಯ ಗುರಿಯೇನು?

 • ವ್ಯಾಕ್ಸಿನ್ಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ?
 • ವ್ಯಾಕ್ಸಿನ್ನಿಂದ ಪ್ರತಿಕಾಯಗಳು ಸೃಷ್ಟಿಯಾಗಿವೆಯೇ?
 • ಮಕ್ಕಳಿಗೆ ವ್ಯಾಕ್ಸಿನ್ ಕೊಡಬೇಕೆ?
 • ಯಾವ ರೀತಿಯ ಆಹಾರ ಸೇವಿಸಬೇಕು?
 • ಮಧುಮೇಹಿಗಳಿಗೆ ಹೆಚ್ಚುವರಿಯಾಗಿ ಅಂದರೆ ಮೂರನೇ ಡೋಸ್ ನೀಡಬಹುದಾ?
 • ೧೮೪೫ ವಯೋಮಾನದವರಿಗೆಲ್ಲರಿಗೂ ಎರಡು ಡೋಸ್ ನೀಡುವ ಅವಶ್ಯಕತೆ ಇದೆಯೇ? ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಆದ್ಯತೆ ಮೇರೆಗೆ ಹೆಚ್ಚುವರಿ ವ್ಯಾಕ್ಸಿನ್ ನೀಡಬಹುದೇ?

***

ವ್ಯಾಕ್ಸಿನೇಷನ್ ಅಗತ್ಯ

ಲಸಿಕೆ ಹಾಕಿದ್ದಾಗಲೂ ಪಾಸಿಟಿವ್ ಬಂದಿದ್ದರೆ ಹಲವು ಕಾರಣಗಳು ಇರುತ್ತವೆ. ಉದಾಹರಣೆಗೆ: ಸೋಂಕಿತ ವ್ಯಕ್ತಿಯ ವಯಸ್ಸು, ಎಚ್ಐವಿ ಥರದ ಸಮಸ್ಯೆಗಳು, ಆಹಾರ ಪದ್ಧತಿ, ಜೀವನ ಶೈಲಿ ಇತ್ಯಾದಿ. ವ್ಯಾಕ್ಸಿನೇಷನ್ ಹೆಚ್ಚಾದರೆ ಸೋಂಕು ತಗುಲುವುದಿಲ್ಲವೆಂದಲ್ಲ. ಆದರೆ ಸಾವುಗಳು ಸಂಭವಿಸುವುದಿಲ್ಲ. ಸೋಂಕು ತಗುಲಿದರೂ ಸಾಮಾನ್ಯ ನೆಗಡಿ, ಕೆಮ್ಮು ಬಂದು ಹೋಗುತ್ತವೆ.

– ಡಾ.ರವೀಂದ್ರ ಪಿ.ವಿ., ವೈರಾಣುತಜ್ಞರು, ಲ್ಯಾಬ್ ಉಸ್ತುವಾರಿಸಿಎಸ್ಐಆರ್ಸಿಎಟಿಆರ್ ಕೋವಿಡ್ ಸೆಂಟರ್

× Chat with us