ಚಾ.ನಗರದಿಂದ ಸುರೇಶ್ ಕುಮಾರ್ ಹಠಾವೋ ಬಿಜೆಪಿ ಬಚಾವೋ… ಫೇಸ್‌ಬುಕ್‌ ವಾಲ್‌ನಲ್ಲಿ ಭುಗಿಲೆದ್ದ ಅಸಮಾಧಾನ

ಚಾಮರಾಜನಗರ/ಗುಂಡ್ಲುಪೇಟೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರ ಕಾರ್ಯವೈಖರಿಗೆ ಪಕ್ಷದಲ್ಲೇ ಅಸಮಾಧಾನ ಬುಗಿಲೆದ್ದಿದೆ. ಈ ಕುರಿತು ತಾಲ್ಲೂಕಿನ ಬಿಜೆಪಿ ಮುಖಂಡರೊಬ್ಬರು ತಮ್ಮ ಫೇಸ್ ಬುಕ್ ವಾಲ್‌ನಲ್ಲಿ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದು, ʻಸುರೇಶ್ ಕುಮಾರ್ ತೊಲಗಿಸಿ; ಬಿಜೆಪಿ ಉಳಿಸಿʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮುಖಂಡ ಹಾಗೂ ಶಾಸಕ ಸಿ.ಎಸ್.ನಿರಂಜನ ಕುಮಾರ್ ಅವರ ಬೆಂಬಲಿಗ ಹಾಗೂ ಬಿಜೆಪಿ ಬರಗಿ ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಂದ್ರ ಮಾದಪ್ಪ ಎಂಬುವವರು ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದು, ʻಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿ ಉಳಿಯಬೇಕೆಂದರೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹಠಾವೋ ಬಿಜೆಪಿ ಬಚಾವೋ’ ಎಂದು ಪೋಸ್ಟ್ ಹಾಕಿದ್ದಾರೆ.

ಈ ಪೋಸ್ಟ್ ಗೆ 82 ಲೈಕ್ ಒತ್ತಿದ್ದು, 62 ಕಾಮೆಂಟ್ಸ್ ಬಂದಿವೆ. ಇಬ್ಬರು ಷೇರ್ ಮಾಡಿದ್ದಾರೆ.

ಇವರೆಗೆಲ್ಲ ನಮ್ಮ ಚಾಮರಾಜನಗರದ ಬಗ್ಗೆ ಏನೂ ಗೊತ್ತಿಲ್ಲ ಎಂದು ಎಜಿಎಂ ಮಾದೇಶ್ ಎಂಬುವರು ಪ್ರತಿಕ್ರಿಯಿಸಿದರೆ, ನಮ್ಮ ಚಾಮರಾಜನಗರದ ಸಮಸ್ಯೆಗಳಿಗೆ ಪರಿಹಾರಬೇಕು ಎಂದರೆ ವಿ.ಸೋಮಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಬೇಕು’ ಎಂದು ಮಹದೇವ ಪ್ರಸಾದ್ ಕಮೆಂಟ್ ಮಾಡಿದ್ದಾರೆ.

ನಮ್ಮ ಜಿಲ್ಲೆಯವರೇ ಉಸ್ತುವಾರಿಯಾದರೆ ಸರಿ ಎಂದು ರಾಜೇಶ್ ಉಪ್ಪಾರ್ ಪ್ರತಿಕ್ರಿಯಿಸಿದ್ದು, ಹೀಗಾದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಕಷ್ಟ ಎಂದು ನಮೊ ಬಸವಣ್ಣ ಎಂಬವವರು ಕಮೆಂಟ್ ಹಾಕಿದ್ದಾರೆ.

× Chat with us