BREAKING NEWS

ನ್ಯಾಯಾಲಯದ ಆದೇಶಗಳಲ್ಲಿ ಇಂಥಾ ಪದ ಬಳಸದಂತೆ ನ್ಯಾಯಾಧೀಶರಿಗೆ ಸುಪ್ರೀಂಕೋರ್ಟ್ ಕೈಪಿಡಿ

ದೆಹಲಿ : ಕಾನೂನು ಪ್ರಕ್ರಿಯೆಗಳಲ್ಲಿ ಲಿಂಗ ಸಂವೇದನೆಯತ್ತ ಒಂದು ದೊಡ್ಡ ಹೆಜ್ಜೆಯಾಗಿ ಸುಪ್ರೀಂಕೋರ್ಟ್ ಇಂದು (ಬುಧವಾರ) ಜೆಂಡರ್ ಸ್ಟೀರಿಯೊಟೈಪ್‌ಗಳಿಂದ (ಇಂಥಾ ಲಿಂಗದವರು ಹೀಗೀಗೆ ಎನ್ನುವ ದೃಷ್ಟಿಕೋನ) ತುಂಬಿದ ಪದಗಳು ಮತ್ತು ಪದಗುಚ್ಛಗಳನ್ನು ಪಟ್ಟಿ ಮಾಡುವ ಕೈಪಿಡಿಯನ್ನು ಬಿಡುಗಡೆ ಮಾಡಿದೆ.

ನ್ಯಾಯಾಲಯದ ಆದೇಶಗಳಲ್ಲಿ ಇಂಥಾ ಪದ ಬಳಸದಂತೆ ಈ ಕೈಪಿಡಿ ಎಚ್ಚರಿಕೆ ನೀಡುತ್ತದೆ. ‘Handbook On Combating Gender Stereotypes’ ಬಿಡುಗಡೆ ಸಮಾರಂಭದಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಹಿಂದಿನ ನ್ಯಾಯಾಲಯದ ತೀರ್ಪುಗಳಲ್ಲಿ ಮಹಿಳೆಯರ ಬಗ್ಗೆ ಬಳಸಲಾದ ಹಲವಾರು ಆಕ್ಷೇಪಾರ್ಹ ಪದಗಳನ್ನು ಉಲ್ಲೇಖಿಸಿದ್ದಾರೆ.

ಈ ಪದಗಳು ಸರಿಯಲ್ಲ. ಈ ಕೈಪಿಡಿಯ ಉದ್ದೇಶವು ಆ ತೀರ್ಪುಗಳನ್ನು ಟೀಕಿಸುವುದು ಅಥವಾ ಅವುಗಳನ್ನು ಅನುಮಾನಿಸುವುದು ಅಲ್ಲ. ಇದು ಜೆಂಡರ್ ಸ್ಟೀರಿಯೊಟೈಪ್‌ಗಳು ಅಜಾಗರೂಕತೆಯಿಂದ ಹೇಗೆ ಶಾಶ್ವತವಾಗಿದೆ ಎಂಬುದನ್ನು ಒತ್ತಿಹೇಳುವುದಾಗಿದೆ ಎಂದು ಅವರು ಹೇಳಿದರು.

ಈ ಸ್ಟೀರಿಯೊಟೈಪ್‌ಗಳನ್ನು ವ್ಯಾಖ್ಯಾನಿಸುವುದು ಮತ್ತು ಅವರಲ್ಲಿ ಜಾಗೃತಿ ಮೂಡಿಸುವುದು ಕೈಪಿಡಿಯ ಗುರಿ. ಮಹಿಳೆಯರ ಬಗ್ಗೆ ರೂಢಿಗತವಾಗಿರುವ ಪದಗಳನ್ನು ಗುರುತಿಸಲು ನ್ಯಾಯಾಧೀಶರಿಗೆ ಇದು ಸಹಾಯ ಮಾಡುತ್ತದೆ. ಕೈಪಿಡಿಯನ್ನು ಸುಪ್ರೀಂಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

ಮಾರ್ಚ್‌ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ, ಮುಖ್ಯ ನ್ಯಾಯಾಧೀಶರು ಜೆಂಡರ್ ಸ್ಟೀರಿಯೊಟೈಪ್‌ಗಳನ್ನು ಉಪಯೋಗಿಸದಂತೆ ಎಚ್ಚರಿಸುವ ಕೈಪಿಡಿಯ ಬಗ್ಗೆ ಮಾತನಾಡಿದ್ದರು.

ಉದಾಹರಣೆಗೆ, ಮಹಿಳೆಯು ಇನ್ನೊಬ್ಬನ ಜತೆ ಸಂಬಂಧದಲ್ಲಿರುವಾಗ ಆಕೆಯನ್ನು ‘ಉಪಪತ್ನಿ’ ಎಂದು ಉಲ್ಲೇಖಿಸಿರುವ ತೀರ್ಪುಗಳನ್ನು ನಾನು ನೋಡಿದ್ದೇನೆ. ಕೌಟುಂಬಿಕ ಹಿಂಸಾಚಾರ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಅಡಿಯಲ್ಲಿ ಎಫ್‌ಐಆರ್‌ಗಳನ್ನು ರದ್ದುಗೊಳಿಸಲು ಇದ್ದ ಅರ್ಜಿಗಳಲ್ಲಿ ನೀಡಿದ ತೀರ್ಪುಗಳಲ್ಲಿ ಮಹಿಳೆಯರನ್ನು ‘ಕೀಪ್ಸ್’ ಎಂದು ಕರೆಯಲಾಗಿದೆ ಎಂದು ಕೈಪಿಡಿಯನ್ನು ಸಿದ್ಧಪಡಿಸಲು ಇದ್ದ ಕಾರಣಗಳನ್ನು ಚಂದ್ರಚೂಡ್ ವಿವರಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ಅಧಿಕಾರಾವಧಿಯಲ್ಲಿ ಸುಪ್ರೀಂಕೋರ್ಟ್‌ನ ಜೆಂಡರ್ ಸ್ಟೀರಿಯೊಟೈಪ್‌ಗಳನ್ನು ತೊಡೆದುಹಾಕಲು ಕೈಪಿಡಿಯು ಮತ್ತೊಂದು ಪ್ರಗತಿಪರ ಕ್ರಮವಾಗಿದೆ. ಈ ಹಿಂದೆ, ಸುಪ್ರೀಂಕೋರ್ಟ್ ತನ್ನ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸುವ ಕಾರ್ಯ ಮಾಡಿತ್ತು.

ನಿನ್ನೆ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಕ್ರಮವನ್ನು ಶ್ಲಾಘಿಸಿದ್ದಾರೆ. ಮೋದಿ ಹೀಗೆ ಹೇಳುತ್ತಿದ್ದಂತೆ ಸಭಿಕರಲ್ಲಿ ಕುಳಿತಿದ್ದ ಮುಖ್ಯ ನ್ಯಾಯಮೂರ್ತಿಗಳು ಕೈಮುಗಿದಿದ್ದು ಕಾಣಿಸಿತು. ಸುಪ್ರೀಂ ಕೋರ್ಟ್ ಇದುವರೆಗೆ ತನ್ನ 9,423 ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಅಪ್‌ಲೋಡ್ ಮಾಡಿದೆ.

ಸರ್ವೋಚ್ಚ ನ್ಯಾಯಾಲಯವು ಅಸ್ತಿತ್ವಕ್ಕೆ ಬಂದ ನಂತರ ಎಲ್ಲಾ ಭಾಷೆಗಳ ಜನರಿಗೆ ತಲುಪಲು ಒಟ್ಟು 35,000 ಪ್ರಮುಖ ನಿರ್ಧಾರಗಳನ್ನು ಮಾಡುವುದು ನಮ್ಮ ಗುರಿಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ಹಿಂದಿಯ ಜೊತೆಗೆ, ತೀರ್ಪುಗಳು ಈಗ ಸುಪ್ರೀಂಕೋರ್ಟ್ ವೆಬ್‌ಸೈಟ್‌ನಲ್ಲಿ ಒಡಿಯಾ, ಗುಜರಾತಿ, ತಮಿಳು, ಅಸ್ಸಾಮಿ, ಖಾಸಿ, ಗಾರೋ, ಪಂಜಾಬಿ, ನೇಪಾಳಿ ಮತ್ತು ಬಂಗಾಳಿ ಭಾಷೆಗಳಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಈ ಪಟ್ಟಿಗೆ ಇನ್ನಷ್ಟು ಭಾಷೆಗಳನ್ನು ಸೇರಿಸಲಾಗುವುದು.

andolanait

Recent Posts

ಓದುಗರ ಪತ್ರ: ಉಳುವ ‘ಯೋಗಿ’ ಕೂಗಿಗೆ ಸರ್ಕಾರ ತರ್ತಾಗಿ ಸ್ಪಂದಿಸಲಿ

ರಾಜ್ಯದ ೧೭೫ ತಾಲ್ಲೂಕುಗಳು ಭೀಕರ ಬರಕ್ಕೆ ತತ್ತರಿಸಿ, ಶೇಕಡಾ ೮೦ ಕ್ಕೂ ಹೆಚ್ಚು ಬೆಳೆ ನಷ್ಟದಿಂದ ಅನ್ನದಾತರು ಸಂಪೂರ್ಣ ಕಂಗಾಲಾಗಿದ್ದರೂ…

40 mins ago

ಓದುಗರ ಪತ್ರ: ರಾಷ್ಟ್ರಕವಿ ಶ್ಲಾಘನೆಯ ಸ್ಮರಣೆ

೧೯೮೬ರ ಆಗಸ್ಟ್ ೨೯ರಂದು (ಜಗದ್ಗುರು ವೀರಸಿಂಹಾಸನ ಮಹಾಸಂಸ್ಥಾನ ಮಠದ ೨೩ ನೇ ಮಠಾಧಿಪತಿ) ಶಿವರಾತ್ರಿ ರಾಜೇಂದ್ರ ಶ್ರೀಗಳ ಅಮೃತ ಮಹೋತ್ಸವದ…

41 mins ago

ಓದುಗರ ಪತ್ರ: ಸೈಬರ್ ವಂಚನೆ: ಜಾಗೃತಿಯೂ ಫಲ ನೀಡುತ್ತಿಲ್ಲವಲ್ಲ…

ರಾಜ್ಯದಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಏಳು ತಿಂಗಳ ಅವಧಿಯಲ್ಲಿ ಸುಮಾರು ರೂ.೬೦೦ ಕೋಟಿಯಷ್ಟು ಹಣ ಸೈಬರ್ ವಂಚಕರ…

44 mins ago

ಸೇವೆ, ಶಿಕ್ಷಣ, ಸಂಸ್ಕಾರದ ಸಂಗಮವಾಗಿದ್ದ ರಾಜೇಂದ್ರ ಶ್ರೀ

ಡಾ.ಕೆ.ಪಿ.ಸಿದ್ಧಲಿಂಗಸ್ವಾಮಿ ಇಂದು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ೧೧೧ನೇ ಜಯಂತಿ ಕೆಲವರು ತಮ್ಮ ಕಾಲದಲ್ಲಿ ಬದುಕುತ್ತಾರೆ; ಕೆಲವರು ತಮ್ಮ ಕಾಲವನ್ನೇ…

4 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಆತ್ಮಬಲ ಅಸ್ತ್ರದಿಂದ ಬ್ರಿಟಿಷರ ಮಣಿಸಿದ ಗಾಂಧಿ ಗಾಂಧಿಜಿ ಕಲ್ಪನೆಯ ಸರ್ವೋದಯ ಸಮಾಜದಲ್ಲಿ ಎಲ್ಲರೂ ಸ್ವತಂತ್ರವಾಗಿರುತ್ತಾರೆ. ಇಲ್ಲಿ ಜಾತಿ, ವರ್ಗ, ಶೋಷಣೆ…

4 hours ago

ಗಾಂಧಿವಾದಕ್ಕೆ ಮರುಳಾಗಿದ್ದ ಮೈಸೂರಿನ ಯಶೋಧರಾ ದಾಸಪ್ಪ

ರೋಹಿಣಿ ಸಂಗಪ್ಪ ದಳವಾಯಿ ಮೈಸೂರು ರಾಜ್ಯ ಕಂಡ ಅಪ್ರತಿಮ ಹೋರಾಟಗಾರ್ತಿ ಮತ್ತು ಜನಸೇವಕಿ ಯಶೋಧರಾ ದಾಸಪ್ಪ. ತಮ್ಮ ದಿಟ್ಟ ನಿಲುವು,…

4 hours ago