ಪ್ಯಾರಾಲಿಂಪಿಕ್ಸ್‌: ಬ್ಯಾಡ್ಮಿಂಟನ್‌ನಲ್ಲಿ ಕನ್ನಡಿಗ ಸುಹಾಸ್‌ ಬೆಳ್ಳಿ ಸಾಧನೆ

ಟೋಕಿಯೊ: ಪ್ಯಾರಾಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಸುಹಾಸ್‌ ಯತಿರಾಜ್‌ ಭಾನುವಾರ ಬೆಳ್ಳಿ ಪದಕ ಗೆದ್ದಿದ್ದಾರೆ.

ಪುರುಷರ ಬ್ಯಾಡ್ಮಿಂಟನ್‌ (ಎಸ್‌ಎಲ್‌–4) ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್‌ನ ಲೂಕಾಸ್‌ ಮಜೂರ್‌ ಎದುರು ಸೋಲು ಕಂಡರು. ಮಜೂರ್‌ ಎದುರು 62 ನಿಮಿಷಗಳ ಹೋರಾಟದಲ್ಲಿ 21-15, 17-21, 15-21 ಅಂತರದಲ್ಲಿ ಸೋಲು ಅನುಭವಿಸಿದರು.

38 ವರ್ಷ ವಯೋಮಾನದ ಕನ್ನಡಿಗ ಸುಹಾಸ್ ಯತಿರಾಜ್, ಗೌತಮ ಬುದ್ಧ ನಗರದ ಜಿಲ್ಲಾಧಿಕಾರಿ(ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್‌)ಯಾಗಿದ್ದಾರೆ. ಇವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಮಂಡ್ಯದ ಲಾಳಿನಕೆರೆ ಮೂಲದ ಸುಹಾಸ್‌ ಯತಿರಾಜ್‌ ಅವರು 2007ನೇ ಬ್ಯಾಚ್‌ನ ಉತ್ತರ ಪ್ರದೇಶ ಕೇಡರ್‌ನ ಐಎಎಸ್‌ ಅಧಿಕಾರಿ. ಐಎಎಸ್‌ ಅಧಿಕಾರಿಗಳ ಸಂಘ ಸಹ ಸುಹಾಸ್‌ ಅವರನ್ನು ಅಭಿನಂದಿಸಿದೆ.

× Chat with us