ಕಾಡು ಹಂದಿಗಳ ಹಾವಳಿ; ಕಬ್ಬಿನ ಬೆಳೆ ನಾಶ

ಹೆಗ್ಗನೂರು: ಕಾಡು ಹಂದಿಗಳ ಹಾವಳಿಯಿಂದ ಸುಮಾರು ಎರಡು ಎಕರೆಗಳಷ್ಟು ಕಬ್ಬು ನಾಶವಾಗಿರುವ ಘಟನೆ ಸರಗೂರು ತಾಲ್ಲೂಕಿನ ಹೆಗ್ಗನೂರು ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಹೆಗ್ಗನೂರು ಗ್ರಾಮದ ಶಿವನಾಗ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಕಬ್ಬು ಬೆಳೆ ನಾಶವಾಗಿದ್ದು, ಕಾಡು ಹಂದಿಗಳ ಹಾವಳಿಯಿಂದ ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಶಿವನಾಗ ರವರ ಕಬ್ಬು ನಾಶವಾಗಿದ್ದು,  ಒಂದು ವರ್ಷದಿಂದ ಬೆಳೆಸಿದ ಕಬ್ಬಿನ ನಾಶ ಅವರಿಗೆ ಸಂಕಷ್ಟ ಉಂಟಾಗುವಂತೆ ಮಾಡಿದೆ. ಆದ್ದರಿಂದ ಅರಣ್ಯ ಇಲಾಖೆ ಈ ಭಾಗದಲ್ಲಿ ಗುಂಪು ಗುಂಪಾಗಿ ಓಡಾಡುವ ಕಾಡು ಹಂದಿಗಳಿಗೆ ಕಡಿವಾಣ ಹಾಕಿ ರೈತರಿಗೆ ಅನುಕೂಲ ವಾಗುವಂತೆ ಮಾಡಬೇಕು ಎಂದು ಆ ಭಾಗದ ರೈತರು ಅರಣ್ಯ ಇಲಾಖೆಗೆ ಮನವಿ ಮಾಡಿದರು.
[cvct title=”Coronavirus Stats” country-code=”IN” label-total=”Total Cases” label-deaths=”Death Cases” label-recovered=”Recovered Cases” bg-color=”#23282D” font-color=”#fff”]
× Chat with us