ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಅಭಿಮಾನಿಗಳಿಗೆ ಸರ್ಪ್ರೈಸ್‌ ಕೊಟ್ಟ ʼರಾಜಕುಮಾರʼ

ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಅಭಿಮಾನಿಗಳಿಗೆ ಸರ್ಪ್ರೈಸ್‌ ಕೊಟ್ಟ ʼರಾಜಕುಮಾರʼ
ಬೆಂಗಳೂರು: ಇಂದು ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ. ಹೊಂಬಾಳೆ ಸಿನಿಮಾ ನಿರ್ಮಾಣ ತಂಡದಿಂದ ಅಪ್ಪು ಅಭಿಮಾನಿಗಳಿಗೆ ಇಂದು ಭರ್ಜರಿ ಸರ್ಪ್ರೈಸ್‌ ಸಿಕ್ಕಿದೆ.
ಪುನೀತ್‌ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಬಗ್ಗೆ ನಾಲ್ಕು ಮಾತುಗಳನ್ನು ಹಂಚಿಕೊಳ್ಳುವಂತೆ ರಾಜ್ಯದ ನಾನಾ ಭಾಗಗಳಲ್ಲಿ ಅಪ್ಪು ಅವರ ಅಭಿಮಾನಿಗಳನ್ನು ಕರೆತಂದು ಮಾತನಾಡಿಸಲಾಯಿತು.
ಹೀಗೆ ಅಭಿಪ್ರಾಯ ಹಂಚಿಕೊಳ್ಳುವ ಅಭಿಮಾನಿಗಳ ಹಿಂಬದಿಯ ಸ್ಕ್ರೀನ್‌ ಹಿಂದೆ ಪುನೀತ್‌ ರಾಜ್‌ಕುಮಾರ್‌ ಅವರು ಬಚ್ಚಿಟ್ಟುಕೊಂಡರು. ಇನ್ನೇನು ಅವರು ಮಾತು ಮುಗಿಸುತ್ತಿದ್ದಂತೆಯೇ ಅವರು ಅಭಿಮಾನಿಯ ಮುಂದೆ ಪ್ರತ್ಯಕ್ಷವಾಗಿ ಅವರಿಗೆ ಸರ್ಪ್ರೈಸ್‌ ಕೊಟ್ಟರು.
ಹೀಗೆ ರಾಜ್ಯದ ನಾಲ್ಕೈದು ವಿಶೇಷ ಅಭಿಮಾನಿಗಳನ್ನು ಅಪ್ಪು ಭೇಟಿಯಾಗಿದ್ದಾರೆ. ಹೊಂಬಾಳೆ ಪ್ರೊಡಕ್ಷನ್‌ ಹೌಸ್‌ನ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಇಂದು ವಿಡಿಯೋ ಬಿಡುಗಡೆ ಮಾಡಿದ್ದು ಇದಕ್ಕೆ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
× Chat with us