ವಿದ್ಯುತ್‌ ಸ್ಪರ್ಶದಿಂದ ವಿದ್ಯಾರ್ಥಿಗೆ ತೀವ್ರ ಗಾಯ: ಚಿಕಿತ್ಸೆ ನೆರವಿಗೆ ಪೋಷಕರ ಮನವಿ

ಹನೂರು: ತಾಲ್ಲೂಕಿನ ರಾಮಾಪುರದ ಗೆಜ್ಜಲನತ್ತ ಗ್ರಾಮದ ಮಾಧವನ್ ಎಂಬ ವಿದ್ಯಾರ್ಥಿ ವಿದ್ಯುತ್ ಸ್ಪರ್ಶದಿಂದ ತೀವ್ರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆತನ ಪೋಷಕರು ನೆರವು ಕೋರಿದ್ದಾರೆ.

ಗ್ರಾಮದ ಮಹೇಶ್ ಹಾಗೂ ರಾಧಾ ದಂಪತಿ ಪುತ್ರ ೯ನೇ ತರಗತಿಯ ಮಾಧವನ್ ಕಳೆದ ಒಂದು ತಿಂಗಳ ಹಿಂದೆ ಮನೆಯಲ್ಲಿ ಟಿವಿ ಸ್ವಿಚ್ ಆನ್ ಮಾಡುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶದಿಂದ ತಲೆ, ಕಾಲು ಹಾಗೂ ಕೈಗಳಿಗೆ ತೀವ್ರ ಗಾಯಗೊಂಡಿದ್ದನು. ಈ ಸಂದರ್ಭದಲ್ಲಿ ಪೋಷಕರು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಮಾಧವನ್‌ಗೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದ್ದು, 1.5 ಲಕ್ಷ ರೂ ಖರ್ಚು ಮಾಡಲಾಗಿದೆ. ಇದೀಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ.

ಮುಂದಿನ ದಿನಗಳಲ್ಲಿ ಮತ್ತೊಂದು ಸರ್ಜರಿ ಮಾಡಬೇಕಿದೆ ಎಂದು ವೈದ್ಯರು ತಿಳಿಸಿದ್ದು, ಲಕ್ಷಾಂತರ ರೂ. ಅವಶ್ಯಕವಾಗಿದೆ. ಆದರೆ, ಕೂಲಿ ಮಾಡಿಕೊಂಡು ಜೀವನ ನಡೆಸುವ ನಮಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಪ್ರತಿ 3 ತಿಂಗಳಿಗೊಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಬೇಕಿದೆ. ಪರಿಣಾಮ ಹಣವಿಲ್ಲದೇ ತುಂಬಾ ತೊಂದರೆ ಪಡುವಂತಾಗಿದೆ ಎಂದು ಪೋಷಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮಾಧವನ್ ಸ್ಥಿತಿ ಹಾಗೂ ಕುಟುಂಬದ ಬಡತನವನ್ನು ಅರಿತ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಧನ ಸಹಾಯವನ್ನು ಮಾಡುವುದರ ಮೂಲಕ ಸಹಾಯ ಹಸ್ತ ನೀಡಿದ್ದಾರೆ. ಆದ್ದರಿಂದ ಮಗನ ಚಿಕಿತ್ಸೆಗೆ ಸಹಾಯ ಹಸ್ತ ನೀಡುವಂತೆ ಪೋಷಕರು ಮನವಿ ಮಾಡಿದ್ದು, 9449445739 ಕ್ಕೆ ಪೋನ್‌ಪೇ ಮೂಲಕ ಹಣ ಸಂದಾಯ ಮಾಡುವುದರ ಮೂಲಕ ಮಗನ ಚಿಕಿತ್ಸೆಗೆ ಸಹಕಾರ ನೀಡುವಂತೆ ಪೋಷಕರು ಮನವಿ ಮಾಡಿದ್ದಾರೆ.

× Chat with us