BREAKING NEWS

ಎಂಎಸ್‌ ಧೋನಿಗೆ ಇದು ಕೊನೇ ಐಪಿಎಲ್ ಎನ್ನುವುದಕ್ಕೆ ಸಿಕ್ತು ಬಲವಾದ ಸಾಕ್ಷಿ!

ಅಹಮದಾಬಾದ್‌: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಈಗಾಗಲೇ ವಿದಾಯ ಹೇಳಿರುವ ಮಹೇಂದ್ರ ಸಿಂಗ್‌ ಧೋನಿ, 2023ರ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿ ಮುಗಿದ ಬಳಿಕ ಐಪಿಎಲ್‌ ವೃತ್ತಿ ಜೀವನಕ್ಕೂ ವಿದಾಯ ಹೇಳುವ ಸಾಧ್ಯತೆ ಇದೆ. ಆದರೆ, ಈ ಬಗ್ಗ ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ನಾಯಕ ಅಧಿಕೃತವಾಗಿ ಎಲ್ಲಿಯೂ ಬಹಿರಂಗಪಡಿಸಿಲ್ಲ. ಆದರೆ, ಶುಕ್ರವಾರ ನಡೆದಿದ್ದ ಒಂದು ಘಟನೆಯಿಂದ ಎಂಎಸ್‌ ಧೋನಿಗೆ ಇದು ಕೊನೆಯ ಐಪಿಎಲ್‌ ಟೂರ್ನಿ ಎಂದು ಭಾಸವಾಗುತ್ತಿದೆ.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ 2023ರ ಐಪಿಎಲ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ 179 ರನ್ ಗುರಿ ಹಿಂಬಾಲಿಸಿದ ಗುಜರಾತ್ ಟೈಟನ್ಸ್ ತಂಡದ ಇನಿಂಗ್ಸ್‌ನಲ್ಲಿ ಎಂಎಸ್‌ ಧೋನಿ ಚೆಂಡನ್ನು ತಡೆಯುವ ಭರದಲ್ಲಿ ನೆಲಕ್ಕೆ ಉರುಳಿದ್ದರು. ಈ ವೇಳೆ ಅವರ ಎಡಗೈ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡಿತ್ತು. ಪಂದ್ಯದ 19ನೇ ಓವರ್‌ನಲ್ಲಿ ದೀಪಕ್‌ ಚಹರ್‌ ಎಸೆತದಲ್ಲಿ ಚೆಂಡು ರಾಹುಲ್‌ ತೆವಾಟಿಯ ಪ್ಯಾಡ್‌ಗೆ ತಾಗಿ ಲೆಗ್ ಸ್ಲಿಪ್ ಕಡೆಗೆ ಹೋಗುತ್ತಿತ್ತು. ಈ ವೇಳೆ ಎಂಎಸ್‌ ಧೋನಿ ತಮ್ಮ ಬಲ ಭಾಗಕ್ಕೆ ಹಾರಿ ಚೆಂಡನ್ನು ತಡೆಯಲು ಪ್ರಯತ್ನಿಸಿದರು. ಆದರೆ, ಅವರಿಂದ ಚೆಂಡನ್ನು ತಡೆಯಲು ಸಾಧ್ಯವಾಗಿಲಿಲ್ಲ.

ಈ ವೇಳೆ ನೆಲಕ್ಕೆ ಉರುಳಿದ ಎಂಎಸ್‌ ಧೋನಿ ಅವರ ಎಡಗೈ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡಿತು. ಈ ಸಂದರ್ಭದಲ್ಲಿ ಸಿಎಸ್‌ಕೆ ನಾಯಕ ತುಂಬಾ ನೋವು ಅನುಭವಿಸಿದರು.ತಮ್ಮ ಇಷ್ಟು ವರ್ಷಗಳ ಕ್ರಿಕೆಟ್‌ನಲ್ಲಿ ವೃತ್ತಿ ಜೀವನದಲ್ಲಿ ಎಂಎಸ್‌ ಧೋನಿ ಎಂದಿಗೂ ಈ ರೀತಿ ಮೈದಾನದಲ್ಲಿ ನೋವು ಅನುಭವಿಸಿರಲಿಲ್ಲ. ಆದರೆ, ಗುಜರಾತ್‌ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ನಡೆದ ಈ ಘಟನೆಯಿಂದ ಎಂಎಸ್‌ ಧೋನಿಯನ್ನು ನೋಡಲು ಅಭಿಮಾನಿಗಳಿಗೆ ಸಾಧ್ಯವಾಗಿರಲಿಲ್ಲ. ಸದಾ ಉತ್ಸಾಹದಲ್ಲಿ ಮೈದಾನದಲ್ಲಿ ಕಾಣುತ್ತಿದ್ದ ಎಂಎಸ್‌ ಧೋನಿಯನ್ನು ಈ ಸ್ಥಿತಿಯಲ್ಲಿ ನೋಡುವುದು ತುಂಬಾ ಕಠಿಣವಾಗಿತ್ತು.

ಈ ಎಲ್ಲಾ ಘಟನೆಗಳನ್ನು ವೀಕ್ಷಿಸಿದ ಬಳಿಕ ಎಂಎಸ್‌ ಧೋನಿಗೆ ಇದು ಕಟ್ಟ ಕಡೆಯ ಐಪಿಎಲ್‌ ಟೂರ್ನಿ ಎಂದು ಎಲ್ಲರಿಗೂ ಮನದಟ್ಟಾಗಿದೆ. ಅವರು ಈಗಲೂ ಅದ್ಭುತ ಫಿಟ್‌ನೆಸ್‌ ಕಾಯ್ದುಕೊಂಡಿದ್ದರೂ ಅವರಿಗೆ 40ಕ್ಕೂ ಹೆಚ್ಚಿನ ವಯಸ್ಸಾಗಿದೆ. ಈ ಹಿನ್ನೆಲೆಯಲ್ಲಿ ಅವರ ದೇಹ ಶೇಕಡಾ 100ರಷ್ಟು ಆಟಕ್ಕೆ ಸಹಕರಿಸುತ್ತಿಲ್ಲ.

ಅಂದಹಾಗೆ ಈ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ 5 ವಿಕೆಟ್‌ ಸೋಲು ಅನುಭವಿಸಿತು. ಕಳೆದ ಆವೃತ್ತಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದ ಚನ್ನೈ ಸೂಪರ್‌ ಕಿಂಗ್ಸ್, ಇದೀಗ 2023ರ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಸೋಲುವ ಮೂಲಕ ಶುಭಾರಂಭ ಪಡೆಯುವಲ್ಲಿ ವಿಫಲವಾಗಿದೆ. ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ತನ್ನ ಮುಂದಿನ ಪಂದ್ಯದಲ್ಲಿ ಸಿಎಸ್‌ಕೆ ಸೆಣಸಲಿದೆ.

 

lokesh

Recent Posts

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕುಡಿಯುವ ನೀರಿಗೆ ಅಭಾವ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಪಿಲಾ ನದಿ ಪಕ್ಕದಲ್ಲೇ ಇದ್ದರೂ ಜನತೆಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಳ್ಳಿಗಳಿಗೆ ನದಿ…

3 hours ago

ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಭಾರೀ ಮಳೆ

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವವ ಮಧ್ಯ…

3 hours ago

ಓದುಗರ ಪತ್ರ: ಸರಗಳ್ಳತನಕ್ಕೆ ಕಡಿವಾಣ ಹಾಕಿ

ಇತ್ತೀಚೆಗೆ ಮೈಸೂರಿನಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಎರಡು ದಿನಗಳ ಹಿಂದಷ್ಟೇ ನಮ್ಮ ಸಂಬಂಧಿಕರೊಬ್ಬರು…

4 hours ago

ಓದುಗರ ಪತ್ರ: ಬಿಗ್‌ಬಾಸ್ ಕಾರ್ಯಕ್ರಮ ನಿಲ್ಲಲಿ

ಕನ್ನಡದ ಖಾಸಗಿ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್-11 ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಸ್ಪರ್ಧಿಗಳು ನಿತ್ಯ ಜಗಳವಾಡುತ್ತಿರುವುದರಿಂದ ಕಾರ್ಯಕ್ರಮ ವೀಕ್ಷಿಸುವವರಿಗೆ ಕಿರಿಕಿರಿಯಾಗುತ್ತಿದೆ. ವಿವಿಧ…

4 hours ago

ಓದುಗರ ಪತ್ರ: ಪೊಲೀಸರಿಗೆ ಧನ್ಯವಾದಗಳು

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಜನ ಸಾಗರವೇ ಹರಿದು ಬಂದಿತ್ತು. ದಸರಾ ಅಂಗವಾಗಿ ಆಯೋಜಿಸಿದ್ದ ಯುವ ಸಂಭ್ರಮ, ಯುವ…

4 hours ago

ಓದುಗರ ಪತ್ರ: ಮುಷ್ಕರ ಮುಂದುವರಿದಿದೆ

ಸರ್ಕಾರವೇ ನಮ್ಮ ದೇವರಾಗಿದೆ ಮೇಲಾಧಿಕಾರಿಗಳ ಮೇಲೆ ಗೌರವವಿದೆ ಜನರ ಸಮಸ್ಯೆಗಳ ಅರಿವಿದೆ ಅವರಿಗಾದ ಅಡಚಣೆಗೆ ವಿಷಾದವಿದೆ ನಮಗೂ ಬದುಕಿದೆ. ನಮ್ಮದೂ…

4 hours ago