ರಾಮನಗರ: ಜಿಲ್ಲೆಯ ಬಿಡದಿಯ ಬಳಿ ರಾಜ್ಯದ ಪ್ರಥಮ ತ್ಯಾಜ್ಯ ಇಂಧನ ಘಟಕ ಆರಂಭವಾಗಲಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ತಿಳಿಸಿದ್ದಾರೆ. ಬಿಬಿಎಂಪಿ ಮತ್ತು ಕೆಪಿಟಿಸಿಎಲ್ ಸಹೋಯೋಗದೊಂದಿಗೆ ಪ್ರಾಯೋಗಿಕವಾಗಿ ಒಂದು ಸ್ಥಾವರ ನಿರ್ಮಿಸುತ್ತಿದ್ದು, ಅದರ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ತಿಳಿದು ಮತ್ತಷ್ಟು ಸ್ಥಾವರ ನಿರ್ಮಾಣ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಬಿಡದಿ ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಥಮ ಬಾರಿಗೆ ರಾಜ್ಯದಲ್ಲಿ ತಾಜ್ಯ ಇಂಧನ ಘಟಕ ಆರಂಭವಾಲಿದೆ. ಬಿಡದಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಿರ್ಮಾಣವಾಗುತ್ತಿದ್ದು ಅಕ್ಟೋಬರ್ ತಿಂಗಳಲ್ಲಿ ಕಾರ್ಯಾರಂಭ ಆಗಲಿದೆ ಎಂದರು.
600 ಟನ್ ಸಾಮರ್ಥ್ಯದ ಘಟಕ : 15 ಎಕರೆ ವಿಸ್ತೀರ್ಣದ ಜಾಗದಲ್ಲಿ ಸುಮಾರು 280 ಕೋಟಿ ವೆಚ್ಚದಲ್ಲಿ ಘಟಕ ನಿರ್ಮಾಣವಾಗುತ್ತಿದೆ. 600 ಟನ್ ಸಾಮರ್ಥ್ಯ ಇರೋ ಇಂಧನ ಘಟಕ ಇದಾಗಿದ್ದು ಇಲ್ಲಿ 11.5 ಮೆಗಾ ವ್ಯಾಟ್ ಪವರ್ ಉತ್ಪಾದನೆಯಾಗುತ್ತದೆ. ಪ್ರತಿ ದಿನ ಬೆಂಗಳೂರಿನಲ್ಲಿ 6 ಸಾವಿರ ಟನ್ ಕಸ ಉತ್ಪಾದನೆಯಾಗುತ್ತದೆ. ಏಳು ಪ್ಲಾಂಟ್ ನಲ್ಲಿ ಹಸಿ ಕಸವನ್ನು ಕಂಪ್ರೆಸ್ ಮಾಡಲಾಗುತ್ತಿದೆ. ಬಂಡೂರು, ಟೆರಾಫಾರಂನಲ್ಲಿ ಅವೈಜ್ಞಾನಿಕವಾಗಿ ಕಸ ಸುರಿಯಲಾಗುತ್ತಿತು. ಹಿಂದೆ ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿದ್ದ ವೇಳೆ ಈ ಬಗ್ಗೆ ಚಿಂತಿಸಲಾಗಿತ್ತು ಎಂದು ಹೇಳಿದರು.
ವಿದೇಶಗಳಲ್ಲಿ ಹೇಗೆ ಕೆಲಸಗಳು ನಡೆಯುತ್ತವೆ ಎಂಬುದನ್ನು ನೋಡಿದ್ದೇವೆ. ಫಾರಿನ್‌ಗಿಂತ ಇಲ್ಲೆ ಚೆನ್ನಾಗಿ ಕೆಲಸ ಆಗುತ್ತಿದೆ. ಬಿಬಿಎಂಪಿ ಮತ್ತು ಕೆಪಿಟಿಸಿಎಲ್ ಸಹೋಯೋಗದೊಂದಿಗೆ ಈ ಸ್ಥಾವರ ನಿರ್ಮಿಸುತ್ತಿದ್ದೆವೆ. ಇಲ್ಲಿ ಕಸದ ವಾಸನೆ ಬರುವುದಿಲ್ಲ. ಪ್ರಾಯೋಗಿಕವಾಗಿ ಒಂದು ಸ್ಥಾವರಕ್ಕೆ ಆರಂಭವಾಗಲಿದೆ. ವಿದ್ಯುತ್ ಉತ್ಪಾದನಾ ಸಾಮರ್ಥ್ಯ ತಿಳಿದು ಮತ್ತಷ್ಟು ಸ್ಥಾವರ ನಿರ್ಮಾಣವ ಯೋಜನೆ ಇದೆ.
ಪ್ರತಿದಿನ 2.76 ಲಕ್ಷ ಯೂನಿಟ್ ಉತ್ಪಾದನೆ : ಎಲ್ಲ ಜಿಲ್ಲೆಯ ಕಸದ ಸಮಸ್ಯೆಯನ್ನು ಈ ರೀತಿ ನಿವಾರಣೆ ಆಗುತ್ತದೆ. ಪ್ರತಿ ಯುನಿಟ್ ಗೆ 8 ರೂ ಖರ್ಚಾಗಲಿದೆ. ಪ್ರತಿದಿನ 2.76 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಇದು ಪೈಲೆಟ್ ಪ್ರಾಜೆಕ್ಟ್ ಮಾಡಿದ್ದು ಸ್ಥಳೀಯ ಕಸಕ್ಕೂ ಅವಕಾಶ ನೀಡಲಾಗುವುದು ಎಂದರು.
ಇನ್ನು ಸಚಿವ ಚಲುವರಾಯಸ್ವಾಮಿ ವಿರುದ್ಧ ಲಂಚ ಆರೋಪ ವಿಚಾರವಾಗಿ ಮಾತನಾಡಿದ ಅವರು, ಆರೋಪ ಮಾಡುವವರು ಸಾಕ್ಷಿ ನೀಡಬೇಕು ಎಂದು ಆಗ್ರಹಿಸಿದರು. ಆರೋಪ ಮಾಡುವುದು ಸುಲಭ. ಆರೋಪದಲ್ಲಿ ಹುರುಳಿಲ್ಲ ಎಂದು ಚಲುವರಾಯಸ್ವಾಮಿ ಅಸೆಂಬ್ಲಿಯಲ್ಲೇ ಹೇಳಿದ್ದು ಈಗಾಗಲೇ ಸಿಎಂ ತನಿಖೆಗೆ ಆದೇಶಿದ್ದಾರೆ ಎಂದು ಜಾರ್ಜ್ ತಮ್ಮ ಸಂಪುಟದ ಸಚಿವರ ಬೆಂಬಲಕ್ಕೆ ನಿಂತರು.
ಸಿಎಂ ಸಿದ್ದರಾಮಯ್ಯ ಲಜ್ಜೆಗೆಟ್ಟ ಸಿಎಂ ಎಂದಿದ್ದ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು,
ಕುಮಾರಸ್ವಾಮಿ ಅವರ ಮಾತುಗಳು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಪೆನ್ ಡ್ರೈವ್ ನಲ್ಲಿ ಏನಿದೆ ಎಂದು ತೋರಿಸಲಿ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಲಂಚದ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಡಿಸಿಎಂ ಸಹ ಉತ್ತರ ನೀಡಿದ್ದಾರೆ. ಇದನ್ನು ಅವರನ್ನೆ ಕೇಳಿ. ಕುಮಾರಸ್ವಾಮಿ ಬರೀ ಆರೋಪಗಳನ್ನ ಮಾಡುತ್ತಾರೆ. ಅದನ್ನ ಯಾರಾದ್ರೂ ಸಾಬೀತು ಮಾಡಿದ್ದರಾ? ಪೆನ್ ಡ್ರೈ ನಲ್ಲಿ ಏನಿದೆ ಎಂಬುದನ್ನು ಅವರು ತೋರಿಸಿಲ್ಲ ಎಂದು ಕುಟುಕಿದರು.
ಶೇ.40 ರಷ್ಟು ಸರಕಾರ ಎಂದು ಹೇಳಿದ್ದು ನಾವಲ್ಲ. ಅದನ್ನ ಹೇಳಿದ್ದು ಗುತ್ತಿಗೆದಾರರು. ಬಿಜೆಪಿ ಅವರದ್ದೇ ಸರ್ಕಾರ ಇದ್ದಾಗ ತನಿಖೆ ಮಾಡಬಹುದಾಗಿತ್ತು. ಯಾಕೆ ಅವರು ತನಿಖೆ ಮಾಡಲಿಲ್ಲ? ನಮ್ಮ ಸರಕಾರ ಈಗಾಗಲೇ ನಿರ್ಣಯ ಕೈಗೊಂಡಿದೆ. ತನಿಖೆ ನಡೆಸಿ ಲೀಗಲ್ ಆಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಶಾಲಾ ಮಕ್ಕಳು ಭಾರವಾದ ಪುಸ್ತಕಗಳ ಬ್ಯಾಗ್ ಹೊರಲಾರದೆ ತ್ರಾಸದಿಂದಲೇ ಹೊತ್ತುಕೊಂಡು ನಡೆಯುವ ದೃಶ್ಯ ಈಗ ಎಲ್ಲೆಡೆ ಕಂಡುಬರುತ್ತದೆ. ಬ್ಯಾಗ್‌ನಲ್ಲಿ ಪಠ್ಯ…
ಸರ್ಕಾರ ಅಧಿಸೂಚನೆ ಹೊರಡಿಸುವುದು ಯಾವಾಗ? ಉದ್ಯೋಗ ನೇಮಕಾತಿ ಯಾವಾಗ? ಇದು ಸಾವಿರಾರು ಉದ್ಯೋಗ ಆಕಾಂಕ್ಷಿಗಳ ಪ್ರಶ್ನೆ. ಇದು ಕಳೆದ ಹಲವು…
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ನೌಕರಿ ಪಡೆಯಲು ಇದ್ದ ವಯೋಮಿತಿಯನ್ನು ಐದು ವರ್ಷ ಹೆಚ್ಚಳ ಮಾಡಿ…
ಕಾಂಗೀರ ಬೋಪಣ್ಣ ಕೊಡಗು-ಕೇರಳದ ಜನರು ಒಟ್ಟಾಗಿ ಆಚರಿಸುವ ವಿಭಿನ್ನ ಆಚರಣೆ; ವಿಶಿಷ್ಟ ಹಬ್ಬಕ್ಕೆ ಅಗತ್ಯ ಸಿದ್ಧತೆ ವಿರಾಜಪೇಟೆ: ಕೇರಳ ಹಾಗೂ…
ಮಹೇಂದ್ರ ಹಸಗೂಲಿ ಪಾದಚಾರಿಗಳು ಓಡಾಡದಂತೆ ವಿರೂಪ; ಒತ್ತುವರಿ ತೆರವಿಗೆ ಸಾರ್ವಜನಿಕರ ಆಗ್ರಹ ಗುಂಡ್ಲುಪೇಟೆ: ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಫುಟ್‌ಪಾತ್‌ಗಳನ್ನು…
‘ವಿದ್ಯಾವಿಕಾಸ’ ಯೋಜನೆಯಡಿ ಅಗತ್ಯವಿದ್ದರೆ ಚಪ್ಪಲಿ ನೀಡಲು ಸಿದ್ಧತೆ ಮೈಸೂರು: ‘ವಿದ್ಯಾವಿಕಾಸ’ ಯೋಜನೆಯಡಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ೧ನೇ ತರಗತಿಯಿಂದ ೧೦ನೇ…