BREAKING NEWS

ಬಡ್ಡಿ ದರ ಏರಿಕೆ ಮಾಡಿದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತೆ ತನ್ನ ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಿದೆ. ಈ ಮೂಲಕ ಕೋಟಿಗಟ್ಟಲೆ ಗ್ರಾಹಕರಿಗೆ ಆಘಾತ ನೀಡಿದೆ. ಬ್ಯಾಂಕ್ ತನ್ನ ಕನಿಷ್ಠ ವೆಚ್ಚದ ಸಾಲದ ದರವನ್ನು 5 ಮೂಲ ಅಂಕಗಳಷ್ಟು ಹೆಚ್ಚಿಸಿದೆ. ಈ ಹೊಸ ದರಗಳು ಇದೇ ಜುಲೈ 15, 2023ರಿಂದ ಜಾರಿಗೆ ಬರಲಿವೆ.

ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ ವಿವಿಧ ಅವಧಿಗಳ ಎಂಸಿಎಲ್‌ಆರ್‌ ಶೇ. 8 ರಿಂದ ಶೇ. 8.75ರವರೆಗೆ ಇರಲಿದೆ. ಈ ಹೆಚ್ಚಳದ ನಂತರ, ಗೃಹ ಸಾಲ, ವಾಹನ ಸಾಲ, ಶಿಕ್ಷಣ ಸಾಲ, ವೈಯಕ್ತಿಕ ಸಾಲ ಇತ್ಯಾದಿಗಳ ಮಾಸಿಕ ಕಂತು ಅಂದರೆ ಇಎಂಐ ಹೊರೆ ಹೆಚ್ಚಲಿದೆ.

ಈ ಪರಿಷ್ಕರಣೆಯೊಂದಿಗೆ ಒಂದು ವರ್ಷದ ಅವಧಿಯ ಎಂಸಿಎಲ್‌ಆರ್ ಈ ಹಿಂದಿನ ಶೇ. 8.50 ರಿಂದ ಶೇ. 8.55ಕ್ಕೆ ಏರಿಕೆಯಾಗಿದೆ. ಹೆಚ್ಚಿನ ಸಾಲಗಳು ಒಂದು ವರ್ಷದ ಎಂಸಿಎಲ್‌ಆರ್ ದರಕ್ಕೆ ಸಂಬಂಧಿಸಿರುತ್ತವೆ. ಹೀಗಾಗಿ ಇದು ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿದೆ.

ಒಂದು ತಿಂಗಳು ಮತ್ತು ಮೂರು ತಿಂಗಳ ಎಂಸಿಎಲ್‌ಆರ್‌ ಕ್ರಮವಾಗಿ 5 ಮೂಲ ಅಂಕಗಳ ಹೆಚ್ಚಳದೊಂದಿಗೆ ಶೇ. 8 ಮತ್ತು ಶೇ. 8.15ಕ್ಕೆ ತಲುಪಿದೆ. ಇದೇ ವೇಳೆ ಆರು ತಿಂಗಳ ಎಂಸಿಎಲ್‌ಆರ್‌ ಶೇ. 8.45ಕ್ಕೆ ಮುಟ್ಟಿದೆ.

ಇನ್ನು ಎರಡು ವರ್ಷಗಳ ಎಂಸಿಎಲ್‌ಆರ್‌ ಸಹ 5 ಮೂಲ ಅಂಕಗಳ ಹೆಚ್ಚಳದೊಂದಿಗೆ ಶೇ. 8.65ಕ್ಕೆ ತಲುಪಿದ್ದರೆ, ಮೂರು ವರ್ಷಗಳ ಎಂಸಿಎಲ್‌ಆರ್‌ ಶೇ. 8.75ಕ್ಕೆ ಏರಿಕೆ ಕಂಡಿದೆ.

ರೆಪೋ ದರ ಸ್ಥಿರವಾದ ನಂತರವೂ ಹೆಚ್ಚುತ್ತಿದೆ ಬಡ್ಡಿ ದರ

ಹಣದುಬ್ಬರ ಈಗಾಗಲೇ ಒಂದು ಹಂತಕ್ಕೆ ನಿಯಂತ್ರಣಕ್ಕೆ ಬಂದಿದ್ದು, ಇದಾದ ಬಳಿಕ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೆಪೋ ದರ ಶೇ. 6.50ರಲ್ಲೇ ಸ್ಥಿರವಾಗಿದೆ. ಆದರೆ ಹೀಗಿದ್ದೂ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರಗಳನ್ನು ಏರಿಕೆ ಮಾಡುತ್ತಿವೆ.

ಮತ್ತೊಂದೆಡೆ ಮೇ 2022 ರಿಂದ ಇಲ್ಲಿಯವರೆಗೆ, ಕೇಂದ್ರ ಬ್ಯಾಂಕ್ ರೆಪೋ ದರವನ್ನು ಒಟ್ಟು 2.50 ಪ್ರತಿಶತದಷ್ಟು ಹೆಚ್ಚಿಸಿದೆ. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬಂದ ಬಳಿಕ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಈ ನಿರ್ಧಾರದ ನಂತರವೂ ಬ್ಯಾಂಕುಗಳು ತಮ್ಮ ಬಡ್ಡಿ ದರಗಳನ್ನು ನಿರಂತರವಾಗಿ ಹೆಚ್ಚಿಸುತ್ತಿವೆ. ಇದರಿಂದ ಗ್ರಾಹಕರು ದುಬಾರಿ ಬಡ್ಡಿ ತೆರಬೇಕಾಗಿದೆ.

ಎಚ್‌ಡಿಎಫ್‌ಸಿ ಬಡ್ಡಿದರವೂ ಸಹ ಬಡ್ಡಿ ದರ ಏರಿಕೆ ಮಾಡಿದೆ

ಎಸ್‌ಬಿಐಗಿಂತ ಮೊದಲು ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಎಚ್‌ಡಿಎಫ್‌ಸಿ ಬ್ಯಾಂಕ್ ಕೂಡ ತನ್ನ ಬಡ್ಡಿದರಗಳನ್ನು ಹೆಚ್ಚಿಸಿತ್ತು. ಎಚ್‌ಡಿಎಫ್‌ಸಿ ಬ್ಯಾಂಕ್ ಎಂಸಿಎಲ್‌ಆರ್ ಅನ್ನು ಶೇ. 0.15 ರಷ್ಟು ಹೆಚ್ಚಿಸಿದೆ. ಕೆಲವು ಆಯ್ದ ಅವಧಿಯ ಸಾಲಗಳ ಮೇಲೆ ಈ ಹೆಚ್ಚಳ ಮಾಡಲಾಗಿದೆ. ಹೊಸ ದರಗಳು ಜುಲೈ 7, 2023 ರಿಂದಲೇ ಜಾರಿಗೆ ಬಂದಿವೆ.

andolanait

Recent Posts

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ: ಮಹದೇಶ್ವರ ಬೆಟ್ಟಕ್ಕೆ ಹೋಗದಂತೆ ಇಮ್ಮಡಿ ಮಹದೇವಸ್ವಾಮಿಗೆ ನಿರ್ಬಂಧ

ಚಾಮರಾಜನಗರ: ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣದ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಕುರಿತು…

19 mins ago

ಶಿವಮೊಗ್ಗ| ಮಂಗನ ಕಾಯಿಲೆಗೆ ಯುವಕ ಬಲಿ

ಶಿವಮೊಗ್ಗ: ಮಂಗನ ಕಾಯಿಲೆ ಸೋಂಕಿನಿಂದ ಬಳಲುತ್ತಿದ್ದ ತೀರ್ಥಹಳ್ಳಿ ತಾಲ್ಲೂಕಿನ 29 ವರ್ಷದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಸಸಿ ತೋಟದ…

42 mins ago

ಪಂಚಭೂತಗಳಲ್ಲಿ ಲೀನರಾದ ಅಜಿತ್‌ ಪವಾರ್‌

ಬಾರಾಮತಿ: ನಿನ್ನೆ ವಿಮಾನ ದುರಂತದಲ್ಲಿ ಸಾವಿಗೀಡಾದ ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವದೊಂದಿಗೆ…

2 hours ago

ನಾನು ರಾಜೀನಾಮೆ ನೀಡಲು ಮುಂದಾಗಿಲ್ಲ: ಸಚಿವ ಕೆ.ಜೆ.ಜಾರ್ಜ್‌ ಸ್ಪಷ್ಟನೆ

ಬೆಂಗಳೂರು: ಇಂದಿನ ಇಲಾಖೆಯಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಬೇಸರಗೊಂಡು ಸಚಿವ ಕೆ.ಜೆ.ಜಾರ್ಜ್‌ ಸಿಎಂ ಸಿದ್ದರಾಮಯ್ಯ…

2 hours ago

ನಟ ಮಯೂರ್‌ ಪಟೇಲ್‌ ವಿರುದ್ಧ ಎಫ್‌ಐಆರ್‌ ದಾಖಲು

ಬೆಂಗಳೂರು: ಕುಡಿದು ವಾಹನ ಚಾಲನೆ ಮಾಡಿ ಕಾರ್‌ಗಳಿಗೆ ಸರಣಿ ಅಪಘಾತ ಉಂಟು ಮಾಡಿದ ನಟ ಮಯೂರ್‌ ಪಟೇಲ್‌ ವಿರುದ್ಧ ಎಫ್‌ಐಆರ್‌…

2 hours ago

ಮೈಸೂರಿನಲ್ಲಿ ಮುಂದುವರೆದ ಕಾಡು ಪ್ರಾಣಿಗಳ ಹಾವಳಿ

ಮೈಸೂರು: ಜಿಲ್ಲೆಯಲ್ಲಿ ಕಾದು ಪ್ರಾಣಿಗಳ ಹಾವಳಿ ಮುಂದುವರಿದಿದ್ದು, ಕಣಿಯನಹುಂಡಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಗ್ರಾಮದ ಕೃಷ್ಣ ಎಂಬುವವರ ಜಮೀನಿನಲ್ಲಿ ಚಿರತೆ…

2 hours ago