ಮಂಡ್ಯ : ಕಾವೇರಿ ಜಲಾನಯನ ಪ್ರದೇಶದಲ್ಲಿ ವರಣ ಕೃಪೆ ತೋರದ ಹಿನ್ನೆಲೆಯಲ್ಲಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರ ಮನವಿ ಮೇರೆಗೆ ವೈದಿಕ ಡಾ.ಭಾನುಪ್ರಕಾಶ ಶರ್ಮ ನೇತೃತ್ವದಲ್ಲಿ ಮಂಗಳವಾರ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಪರ್ಜನ್ಯ ಹೋಮ ನಡೆಸಲಾಯಿತು.
ಮಳೆಗಾಗಿ ಪ್ರಾರ್ಥಿಸಿ ಕೆಆರ್‌ಎಸ್ ಡ್ಯಾಂನ ಕಾವೇರಿ ಮಾತೆ ಪ್ರತಿಮೆ ಮುಂಭಾಗ 12 ಮಂದಿ ವೈದಿಕ ತಂಡದಿಂದ ಪರ್ಜನ್ಯ ಹೋಮ ಸೇರಿದಂತೆ ವಿವಿಧ ವಿಶೇಷ ಪೂಜೆ ಮಾಡಲಾಯಿತು.
ಈ ಸಂದರ್ಭ ಮಾತನಾಡಿದ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಕೆಆರ್‌ಎಸ್ ಡ್ಯಾಂ ಭರ್ತಿಯಾಗಿಲ್ಲ. ಇದರಿಂದಾಗಿ ಬೆಳೆ ಬೆಳೆದಿರುವ ರೈತರಲ್ಲಿ ತೀವ್ರ ಆತಂಕ ಮೂಡಿದೆ. ಇದರಿಂದಾಗಿ ಪರ್ಜನ್ಯ ಹೋಮ ಸೇರಿದಂತೆ ವಿವಿಧ ಬಗೆಯ ಪೂಜೆಗಳನ್ನು ಮಾಡಲಾಯಿತು ಎಂದರು.
ಈಗಾಗಲೇ ನಾಲೆಗಳಿಗೆ ನೀರು ನಿಲ್ಲಿಸಿರುವುದರಿಂದ ಬೆಳೆಗಳು ಒಣಗುತ್ತಿವೆ. 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 81 ಅಡಿಗೆ ಕುಸಿದಿದೆ. ಹೀಗಾಗಿ ಪರ್ಜನ್ಯ ಹೋಮದ ಮೊರೆ ಹೋಗಬೇಕಾಯಿತು ಎಂದು ಹೇಳಿದರು.
ಪರ್ಜನ್ಯ ಹೋಮ ನಡೆಸಿದಾಗಲೆಲ್ಲ ಉತ್ತಮ ಮಳೆಯಾಗಿ ಡ್ಯಾಂ ಭರ್ತಿಯಾಗಿದೆ. 2021 ರಲ್ಲೂ ಮಳೆ ಕೈಕೊಟ್ಟಾಗ ಭಾನುಪ್ರಕಾಶ ಶರ್ಮ ನೇತೃತ್ವದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಪೂಜೆ ನೆರವೇರಿಸಲಾಗಿತ್ತು. ಇದಾದ ಬಳಿಕ ಎರಡೇ ದಿನದಲ್ಲಿ ಮಳೆ ಸುರಿದು ಡ್ಯಾಂ ಸಂಪೂರ್ಣ ಭರ್ತಿಯಾಗಿತ್ತು ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಪೂಜೆ ಮಾಡುವಂತೆ ವೈದಿಕ ಭಾನುಪ್ರಕಾಶ ಶರ್ಮ ಅವರಲ್ಲಿ ನಾನು ಮನವಿ ಮಾಡಲಾಗಿ ಪರ್ಜನ್ಯ ಜಪ, ಹೋಮ, ಕಳಶ ಸ್ಥಾಪನೆ, ಮಹಾ ಗಣಪತಿ ಪೂಜೆ, ಪುಣ್ಯಹಾದಿ, ಆದಿತ್ಯ ಪೂಜೆ, ಮಳೆಯ ದೇವತೆಗಳ ಆಹ್ವಾಹನೆ, ರುದ್ರಾಭಿಷೇಕ ಮೂಲಮಂತ್ರಗಳನ್ನು ಜಪಿಸುತ್ತಾ ವೈದಿಕರಿಂದ ವಿಶೇಷ ಪೂಜೆ ಮಾಡಲಾಗಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ನಡೆಯುವುದು ೨೦೨೮ ಏಪ್ರಿಲ್/ಮೇ ತಿಂಗಳಲ್ಲಿ, ಅಂದರೆ ಸುಮಾರು, ಇನ್ನು ಎರಡೂವರೆ ವರ್ಷಗಳ ಬಳಿಕ. ಆದರೆ…
ರಾಜ್ಯದಲ್ಲಿ ಪರೀಕ್ಷೆಗಳೆಂದರೆ ಸೋರಿಕೆಗಳ ಸರಣಿ ಎಂಬಂತಾಗಿರುವುದು ದುರದೃಷ್ಟಕರ. ಈ ಬಾರಿ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಯ ೮೦ ಅಂಕಗಳ…
ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸುವ ಮೂಲಕ ಶಾಲೆಗಳ ನೋಟವನ್ನು ಬದಲಾಯಿಸುವುದರ ಜೊತೆಗೆ, ವಿದ್ಯಾರ್ಥಿಗಳ ಆಲೋಚನಾ ಶೈಲಿಯನ್ನು…
ವೈಡ್ ಆಂಗಲ್ ಬಾ.ನಾ.ಸುಬ್ರಹ್ಮಣ್ಯ ಅತಿ ಹೆಚ್ಚು ಕಾಲ ನಾಡಿನ ಆಡಳಿತ ಚುಕ್ಕಾಣಿ ಹಿಡಿದಿದ್ದವರು ದೇವರಾಜ ಅರಸು. ಆ ದಾಖಲೆಯನ್ನು ಮೊನ್ನೆ…
ಮಹೇಶ್ ಕರೋಟಿ ಇದ್ದೂ ಇಲ್ಲದಂತಾಗಿರುವ ಟ್ರಸ್ಟ್ , ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಿಕ್ಕೇರಿ: ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ (ಕೆ.ಎಸ್.ನರಸಿಂಹಸ್ವಾಮಿ) ಅವರು…
ಜಿ.ಎಲ್.ತ್ರಿಪುರಾಂತಕ ಇಂದು ದುಗ್ಗಹಟ್ಟಿ ವೀರಭದ್ರಪ್ಪ ಅವರ ಸ್ಮರಣೆ, ನುಡಿನಮನ ಕಾರ್ಯಕ್ರಮ ತನಗಾಗಿ ಬದುಕಿದವರನ್ನು ಸಮಾಜ ಬೇಗ ಮರೆಯುತ್ತದೆ, ಸಮಾಜಕ್ಕಾಗಿ ಬದುಕಿದವರನ್ನು…