ಮೈಸೂರು: ಬೈಕ್‌ ಕೊಡಿಸಲಿಲ್ಲವೆಂದು ಬೇಸರ… ಸಾಫ್ಟ್‌ವೇರ್‌ ಇಂಜಿನಿಯರ್‌ ಆತ್ಮಹತ್ಯೆ

ಮೈಸೂರು: ಬೈಕ್‌ ಕೊಡಿಸಲಿಲ್ಲವೆಂಬ ಬೇಸರಕ್ಕೆ ಸಾಫ್ಟ್‌ವೇರ್‌ ಇಂಜಿನಿಯರ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುವೆಂಪುನಗರದಲ್ಲಿ ನಡೆದಿದೆ.

ಅಜಯ್‌ (25) ಮೃತ ಯುವಕ. ಈತ ಕಳೆದೊಂದು ವರ್ಷದಿಂದ ಬೆಂಗಳೂರಿನ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ. ಲಾಕ್‌ಡೌನ್‌ ಕಾರಣ ಮೈಸೂರಿನ ತಮ್ಮ ಮನೆಯಲ್ಲಿಯೇ ವರ್ಕ್‌ ಫ್ರಂ ಹೋಮ್‌ ಕಾರ್ಯ ನಿರ್ವಹಿಸುತ್ತಿದ್ದ. ಈ ವೇಳೆ ತನಗೆ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಬೇಕು ಎಂದು ಪೋಷಕರಲ್ಲಿ ಕೇಳಿದ್ದಾನೆ. ಸದ್ಯಕ್ಕೆ ಬೇಡ ಸ್ವಲ್ಪ ದಿನ ಕಳೆಯಲಿ ಎಂದು ಪೋಷಕರು ಮನವೊಲಿಸಿದ್ದಾರೆ. ಇದರಿಂದ ಬೇಸರಗೊಂಡು ತಂದೆ-ತಾಯಿ ಹೊರಗಡೆ ಹೋಗಿದ್ದಾಗ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ.

ಈ ಸಂಬಂಧ ಕುವೆಂಪುನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us