ಮೈಸೂರು ರೈಲ್ವೆ ನಿಲ್ದಾಣಕ್ಕೆ ನಾಗಪ್ಪ ಎಂಟ್ರಿ!

ಮೈಸೂರು: ರೈಲ್ವೆ ನಿಲ್ದಾಣದ ಮೆಟ್ಟಿಲುಗಳ ಬಳಿ ಅಡಗಿದ್ದ ನಾಗರಹಾವನ್ನು ಸ್ನೇಕ್‌ ಶ್ಯಾಮ್‌ ಪುತ್ರ ಉರಗತಜ್ಞ ಸೂರ್ಯ ಕೀರ್ತಿ ರಕ್ಷಿಸಿದ್ದಾರೆ.

ಕಚೇರಿ ಕೊಠಡಿಯೊಂದರ ಮೆಟ್ಟಿಲು ಜಾಗದಲ್ಲಿ ನಾಗರಹಾವು ಅಡಗಿತ್ತು. ಅದನ್ನು ಕಂಡವರು ಕೂಡಲೇ ಉರಗತಜ್ಞ ಸೂರ್ಯ ಕೀರ್ತಿ ಅವರಿಗೆ ಫೋನ್‌ ಕರೆ ಮಾಡಿ ತಿಳಿಸಿದ್ದಾರೆ. ಜೋರು ಮಳೆಯ ನಡುವೆಯೂ ಸ್ಥಳಕ್ಕೆ ಆಗಮಿಸಿದ ಉರಗತಜ್ಞ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡಲು ಕೊಂಡೊಯ್ದರು.

× Chat with us