ಮೈಸೂರು: ಯಡಿಯೂರಪ್ಪ ಪಾಲ್ಗೊಂಡಿದ್ದ ಕಾರ್ಯಕ್ರಮ ವೇದಿಕೆ ಬಳಿ ನಿಲ್ಲಿಸಿದ್ದ ಬೈಕ್‌ನಲ್ಲಿ ಹಾವು!

ಮೈಸೂರು: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದ ವೇದಿಕೆ ಬಳಿ ನಿಂತಿದ್ದ ಬೈಕ್‌ಗೆ ಹಾವಿನ ಮರಿಯೊಂದು ಸೇರಿಕೊಂಡು ಜನರಲ್ಲಿ ಆತಂಕ ಮೂಡಿಸಿದ ಘಟನೆ ಶುಕ್ರವಾರ ನಡೆಯಿತು.

ಮೋದಿ ಅವರ ಜನ್ಮದಿನದ ಅಂಗವಾಗಿ ವಿದ್ಯಾರಣ್ಯಪುರಂನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಡಿಯೂರಪ್ಪ ಅವರು ಅತಿಥಿಯಾಗಿ ಪಾಲ್ಗೊಂಡಿದ್ದರು. ಆಗ ವೇದಿಕೆ ಬಳಿ ನಿಲ್ಲಿಸಿದ್ದ ಬೈಕ್‌ನಲ್ಲಿ ಹಾವು ಸೇರಿಕೊಂಡಿತ್ತು.

ಉರಗ ಸಂರಕ್ಷಕ ಅಯ್ಯ ಎಂಬವರು ಹಾವನ್ನು ಹುಡುಕಿ ಹೊರ ತೆಗೆಯಲು ಪ್ರಯತ್ನಿಸಿದರು. ಸುಮಾರು ಅರ್ಧ ಗಂಟೆ ಕಾರ್ಯಾಚರಣೆ ನಡೆಸಿ ಕೊನೆಗೂ ಹಾವಿನ ಮರಿಯನ್ನು ರಕ್ಷಿಸಿದರು.

× Chat with us