ಸಿಲ್ವರ್‌ ಮರ ಕಳವು ಮಾಡಿದ್ದ ಆರೋಪಿಗಳ ಬಂಧನ

ಕೊಡಗು: ಸಿಲ್ವರ್‌ ಮರ ಕಳವು ಮಾಡಿದ್ದ ಆರೋಪಿಗಳನ್ನು ಶನಿವಾರಸಂತೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹಾಸನ ಮೂಲದ ಸೋಮಶೇಖರ್, ಗೌತಮ್, ಕಿರಿಕೊಡ್ಲಿಯ ಪುಟ್ಟಸ್ವಾಮಿ ಬಂಧಿತ ಆರೋಪಿಗಳು.

ಕಳೆದ ಸೆ.3ರಂದು ಕಿರಿಕೊಡ್ಲಿ ಮಠದ ತೋಟದಿಂದ ಸಿಲ್ವರ್‌ ಮರಗಳನ್ನು ಕಳವು ಮಾಡಿದ್ದರು. ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಳವು ಮಾಡಿದ್ದ ಮರ ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಶನಿವಾರಸಂತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

× Chat with us